Skip to main content


ಐಪಿಎಲ್ ನೋಡೋ ಯುವಕರಿಗೆ ಈ ಕೆಲ್ಸ ಮಾಡದಂತೆ ಬುದ್ದಿಮಾತು ಹೇಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಇಂದು ಐಪಿಎಲ್ ಎನ್ನುವುದು ಕೇವಲ ಮನರಂಜನಾತ್ಮಕವಾಗಿ ಮಾತ್ರ ಉಳಿದಿಲ್ಲ ಎಷ್ಟೋ ಮಂದಿ ಐಪಿಎಲ್ ಶುರುವಾದ ತಕ್ಷಣ ಸಾವಿರದಿಂದ ಹಿಡಿದು ಲಕ್ಷಗಟ್ಟಲೇ ಬೆಟ್ಟಿಂಗ್‍ನಲ್ಲಿ ಹಣ ಕಟ್ತಾರೆ. ಈ ನಿಟ್ಟಿನಲ್ಲಿ ಯುವಜನರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿವಿಮಾತು ಹೇಳಿದ್ದಾರೆ.

IPL Gamblers ಎಂಬ ಕನ್ನಡ ಕಿರುಚಿತ್ರವನ್ನು ಮೆಚ್ಚಿಕೊಂಡು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ಒಂದನ್ನು ಅಪ್ಲೋಡ್ ಮಾಡಿರುವ ದರ್ಶನ್, ಐಪಿಎಲ್ ನೋಡುವ ಯುವಕರಿಗೆ ಬೆಟ್ಟಿಂಗ್ ನಲ್ಲಿ ತೊಡಗದಂತೆ ಮನವಿ ಮಾಡಿಕೊಂಡಿದ್ದಾರೆ. 

“ಐಪಿಎಲ್ ಸ್ಟಾರ್ಟ್ ಆಗಿದೆ, ತಕ್ಷಣ ಹೆಚ್ಚು ಜನರು ಬೆಟ್ಟಿಂಗ್ ಕಟ್ಟೋಕೆ ಶುರು ಮಾಡ್ಕೊಬಿಡ್ತಾರೆ, ಮ್ಯಾಚ್ ನೋಡೋದಕ್ಕಿಂತ ಹೆಚ್ಚಾಗಿ ಬೆಟ್ಟಿಂಗ್ ಕಟ್ಟುತ್ತಾ ಇರ್ತಾರೆ. ಬೆಟ್ಟಿಂಗ್ ಕಟ್ಟೋಕೆ ಅಂತಾನೆ ಸಾಲ-ಸೂಲ ಮಾಡಿ ಪಡಬಾರದ ಹರಸಾಹಸ ಪಡ್ತಾರೆ. ದಯವಿಟ್ಟು ಐಪಿಎಲ್ ಅನ್ನು ಮ್ಯಾಚ್ ರೀತಿಯಲ್ಲಿ ನೋಡಿ, ಎಂಜಾಯ್ ಮಾಡಿ. ಬೆಟ್ಟಿಂಗ್ ಅಂತ ತಲೆ ಕೆಡಿಕೊಂಡು ನಿಮ್ ಜೀವನ ಹಾಳು ಮಾಡ್ಕೋಬೇಡಿ. ಪ್ಲೇಯರ್ಸ್ ಕಷ್ಟ ಪಟ್ಟು ಆಡ್ತಾರೆ ಅದನ್ನು ನೀವು ಇಷ್ಟ ಪಟ್ಟು ನೋಡಿ. ಯಾವುದೇ ಕಾರಣಕ್ಕೂ ಬೆಟ್ಟಿಂಗ್ ಬೂತಕ್ಕೆ ಸಿಲುಕಿ ನರಳಾಡಬೇಡಿ” ಎನ್ನುವ ಮಾತುಗಳನ್ನು ದರ್ಶನ್ ಹಾಡಿದ್ದಾರೆ.       

short by Pawan / read more at Arali Katte


Comments