Skip to main content


ಸದ್ಯದಲ್ಲಿಯೇ ಎಟಿಎಂ, ಚೆಕ್‌, ಕಾರ್ಡ್‌ ಸೇವೆಗೂ ಶುಲ್ಕ?

ಎಟಿಎಂ ವ್ಯವಹಾರಗಳು, ಚೆಕ್‌ ಬುಕ್‌, ಕಾರ್ಡ್‌ಗಳು ಸೇರಿದಂತೆ ಕೆಲವು ಸೇವೆಗಳನ್ನು ಬ್ಯಾಂಕ್‌ಗಳು ಈಗ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿವೆ.  ಸಾಮಾನ್ಯವಾಗಿ ಚೆಕ್‌ ಬುಕ್‌, ಎಟಿಎಂ ವಿತ್‌ ಡ್ರಾ, ಕಾರ್ಡ್‌ಗಳು ಇನ್ನಿತರ ಸೇವೆಗಳಿಗೆ ಬ್ಯಾಂಕ್‌ಗಳು ಶುಲ್ಕ ವಿಧಿಸುತ್ತವೆ. ಆದಾಗ್ಯೂ, ಉಳಿತಾಯ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್‌ ಉಳ್ಳ ಗ್ರಾಹಕರಿಗೆ ಉಚಿತವಾಗಿ ಸೇವೆ ನೀಡಲಾಗುತ್ತದೆ. ಮಿನಿಮಂ ಬ್ಯಾಲೆನ್ಸ್‌ ಉಳಿಸದ ಗ್ರಾಹಕರಿಗೆ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ಅಂದರೆ, ಬ್ಯಾಂಕ್‌ನ ಈ ಸೇವೆಗಳು ತೆರಿಗೆ ವ್ಯಾಪ್ತಿಗೆ ಸೇರುತ್ತವೆ. ಇವನ್ನು 'ಪರಿಗಣಿಸಲಾದ ಸೇವೆ'ಗಳೆಂದು ತೆರಿಗೆ ಇಲಾಖೆ ಗುರ್ತಿಸಿ ತೆರಿಗೆ ವಿಧಿಸಲು ಅವಕಾಶವಿದೆ. ಅದರ ಅನ್ವಯವೇ, ದೇಶದ ಬೃಹತ್‌ ಬ್ಯಾಂಕ್‌ಗಳಾದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಎಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಕ್‌ ಮಹೀಂದ್ರ ಬ್ಯಾಂಕ್‌ಗಳಿಗೆ ಸರಕು ಮತ್ತು ಸೇವಾ ತೆರಿಗೆ ಮಹಾನಿರ್ದೇಶನಾಲಯವು (ಡಿಜಿಜಿಎಸ್‌ಟಿ) ಷೋಕಾಸ್‌ ನೋಟಿಸ್‌ ನೀಡಿದ್ದು, ತೆರಿಗೆ ಕಟ್ಟುವಂತೆ ಸೂಚಿಸಿದೆ. ಉಳಿದ ಬ್ಯಾಂಕ್‌ಗಳಿಗೂ ಇಂಥದ್ದೇ ನೋಟಿಸ್‌ ನೀಡುವ ಸಾಧ್ಯತೆಗಳಿವೆ.             

short by Pawan / more at Vijayakarnataka

Comments