Skip to main content


ಮತದಾನ ಮಾಡುವಂತೆ ಪ್ರೇರೇಪಿಸಲು ವಿಶಿಷ್ಟ ವಿವಾಹ ಆಮಂತ್ರಣ ಪತ್ರಿಕೆ ಮಾಡಿದ ಜೋಡಿ

ಸಾಮಾಜಿಕ ಕಾರ್ಯಕರ್ತ ಆಗಿರುವ ಸಿದ್ದಪ್ಪ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯ ಮೂಲಕ ಮತದಾರರಲ್ಲಿ ಜಾಗೃತಿಯುಂಟು ಮಾಡಲು ಬಯಸಿದ್ದಾರೆ. ಅದಕ್ಕೆಂದೇ ಅವರ ವಿವಾಹ ಆಮಂತ್ರಣ ಪತ್ರಿಕೆ ಮತದಾರರ ಗುರುತು ಪತ್ರವನ್ನೇ ಹೋಲುತ್ತಿದೆ. ಅವರ ಆಮಂತ್ರಣ ಪತ್ರಿಕೆಯಲ್ಲಿ ಮತದಾರರ ಗುರುತು ಪತ್ರದಲ್ಲಿರುವ ಚುನಾವಣಾ ಆಯೋಗದ ಲಾಂಛನವಿರುವಡೆ ರಾಷ್ಟ್ರ ಲಾಂಛನದ ಚಿತ್ರವಿದ್ದು ಯುನೀಕ್ ಕೋಡ್ ಆಗಿ ಎಸ್‍ಜೆಎಂಆರ್ ಜಿ 270422018 ಆಗಿದೆ. ಇದು ಅವರಿಬ್ಬರ ಹೆಸರು ಹಾಗೂ ಮದುವೆ ದಿನಾಂಕವನ್ನು ಸೂಚಿಸುತ್ತದೆ. ಆಮಂತ್ರಣ ಪತ್ರಿಕೆಯ ಒಂದು ಭಾಗದಲ್ಲಿ ವರ ಹಾಗೂ ವಧುವಿನ ಹೆಸರು, ವಿವಾಹದ ಸ್ಥಳ, ದಿನಾಂಕ ಮತ್ತು ವಧೂವರರ ಚಿತ್ರಗಳಿದ್ದರೆ, ಇನ್ನೊಂದು ಮಗ್ಗುಲಲ್ಲಿ ಕುಟುಂಬ ಸ್ನೇಹಿತ ವರ್ಗಕ್ಕೆ ಮದುವೆಗೆ ಆಮಂತ್ರಿಸುವ ಜತೆಗೆ ಜವಾಬ್ದಾರಿಯಿಂದ ಮತದಾನ ಮಾಡುವಂತೆಯೂ ಆಗ್ರಹಿಸಲಾಗಿದೆ. ನಿಮ್ಮ ಮತ ಅಮೂಲ್ಯ ಎಂದೂ ಬರೆಯಲಾಗಿದೆ.    

short by Pawan / read more at Varthabharathi

Comments