Skip to main content


ಓಡಿ ಮಂದೀಪ್ ಸಿಂಗ್‍ಗೆ ಕೊಹ್ಲಿ ಚಾಲೆಂಜ್!

ತನ್ನ ವೇಗವನ್ನು ಮೀರಿಸುವಂತೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮದೇ ತಂಡದ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಸದಾ ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದಿಂದಲೇ ಗುರುತಿಸಿಕೊಂಡಿದ್ದಾರೆ. ಅಲ್ಲದೇ ತಮ್ಮ ತಂಡದ ಆಟಗಾರರಿಗೂ ಇದೇ ರೀತಿ ತಮ್ಮ ಈ ಆಕ್ರಮಣಕಾರಿ ಪ್ರವೃತ್ತಿಯನ್ನು ಹುರಿದುಂಬಿಸುತ್ತಾರೆ. ಸದ್ಯ ಕೊಹ್ಲಿ ತಮ್ಮ ತಂಡದ ಯುವ ಆಟಗಾರ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕೊಹ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕೇವಲ 8.90 ಸೆಕೆಂಡ್ ನಲ್ಲಿ 3 ರನ್ ಓಡಿದ್ದಾರೆ. ಮೊದಲ ರನ್ 3.9 ಸೆಕೆಂಡ್, 2ನೇ ರನ್ 2.39 ಸೆಕೆಂಡ್ ಹಾಗೂ ಮೂರನೇ ರನ್ 2.61 ಸೆಕೆಂಡ್ ನಲ್ಲಿ ಓಡಿ ಪೂರ್ಣಗೊಳಿಸಿದ್ದಾರೆ. ಈ ವಿಡಿಯೋ ಮೂಲಕ ಮಂದೀಪ್ ಸಿಂಗ್‍ಗೆ ಚಾಲೆಂಜ್ ಮಾಡಿರುವ ಕೊಹ್ಲಿ, ನೀವು ನನಗಿಂತಲೂ ವೇಗವಾಗಿ ಓಡುತ್ತಿರಾ? ಇಲ್ಲಿ ನನ್ನ ವೇಗದ 3 ರನ್ ಗಳ ವಿಡಿಯೋ ನೀಡಿದ್ದೇನೆ. ಪ್ಯಾಡ್ ಧರಿಸಿ ನಿಮ್ಮ ವೇಗದ 3 ರನ್ ವಿಡಿಯೋ ಕಳುಹಿಸಿ. ನೀವು ನನ್ನ 8.90 ಸೆಕೆಂಡ್ ವೇಗವನ್ನು ಮೀರಿಸುತ್ತೀರಾ ನೋಡೋಣ ಎಂದು ಬರೆದುಕೊಂಡಿದ್ದಾರೆ.         

short by Prajwal / more at PublicTV


Comments