Skip to main content


ಎಗೈನ್ ಲಾಸ್ಟ್ ಓವರ್ ಥ್ರಿಲ್ಲರ್ ಫಿನಿಶ್; ಚೆನ್ನೈಗೆ ರೋಚಕ ಗೆಲುವು

ಸಾವಿರಾರು ದಿನಗಳ ಬಳಿಕ ತವರು ನೆಲದಲ್ಲಿ ಆಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರೋಚಕ ಜಯ ದಾಖಲಿಸಿದೆ, ಐಪಿಎಲ್ 2018ರ ಐದನೆ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗಳ ಜಯ ಗಳಿಸಿತು. ಕೊನೆಯ ಓವರ್ ನಲ್ಲಿ ಗೆಲ್ಲಲು 17ರನ್ ಗಳಿಸಿದ ಬೇಕಿದ್ದ ಚೆನ್ನೈ ತಂಡಕ್ಕೆ ಮತ್ತೊಮ್ಮೆ ಬ್ರಾವೋ ಬಲ ತಂದರು. 204ರನ್ ಗುರಿಯನ್ನು ಮುಟ್ಟಿದ ಸೂಪರ್ ಕಿಂಗ್ಸ್ ತನ್ನ ತವರು ನೆಲದಲ್ಲಿ ಮೊದಲ ಜಯ ದಾಖಲಿಸಿತು. 19.5 ಓವರ್ ಗಳಲ್ಲಿ 205/5 ಸ್ಕೋರ್ ಮಾಡಿ 5 ವಿಕೆಟ್ ಗಳ ಗೆಲುವು ಸಾಧಿಸಿ ಸಂಭ್ರಮಿಸಿದರು.

ಕುಸಿತ ಕಂಡಿದ್ದ ಕೊಲ್ಕತ್ತ ನೈಟ್‌ ರೈಡರ್ಸ್ ತಂಡಕ್ಕೆ ಆಂಡ್ರೂ ರಸೆಲ್ ಆಸರೆಯಾದರು, ಭಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಅವರು ಕೊಲ್ಕತ್ತ ತಂಡ ಸವಾಲಿನ ಮೊತ್ತ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೊಲ್ಕತ್ತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 202ರನ್ ಗಳಿಸಿತು.           

Short by Prajwal / read more at Oneindia

Comments