Skip to main content


ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಸೀಸ್ ಕ್ರಿಕೆಟಿಗ ಫಿಂಚ್

ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ ಆ್ಯರೋನ್ ಫಿಂಚ್ ತಮ್ಮ ಬಹುದಿನಗಳ ಗೆಳತಿ ಏಮಿ ಗ್ರಫಿಥ್ಸ್‌ರೊಂದಿಗೆ ಭಾನುವಾರ ಇಲ್ಲಿನ ವಿಲ್ಲೋ ಹಾಗೂ ಸ್ಟೋನ್ ಎಸ್ಟೇಟ್‌ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು. ಮದುವೆಯಿಂದಾಗಿ ಫಿಂಚ್ ಐಪಿಎಲ್‌'ನ ಮೊದಲ ಪಂದ್ಯಕ್ಕೆ ಗೈರಾಗುವುದಾಗಿ ಮೊದಲೇ ಘೋಷಿಸಿದ್ದರು. ವಿವಾಹ ಕಾರ್ಯಕ್ರಮದಲ್ಲಿ ಫಿಂಚ್‌ರ ಆಪ್ತ ಸ್ನೇಹಿತ, ಆಸ್ಟ್ರೇಲಿಯಾದ ತಾರಾ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ನಿರೂಪಣೆ ಮಾಡಿದರು. ಮ್ಯಾಕ್ಸ್‌ವೆಲ್ ಸಹ ಭಾನುವಾರದ ಪಂದ್ಯಕ್ಕೆ ಗೈರಾಗಿದ್ದರು. ಆಸ್ಟ್ರೇಲಿಯಾದ ಅನೇಕ ತಾರಾ ಕ್ರಿಕೆಟಿಗರು ನವದಂಪತಿಗೆ ಶುಭ ಕೋರಿದರು.

short by Prajwal / read more at Suvarna news

Comments