Skip to main content


ಪ್ರಭಾಸ್‌-ನಿಹಾರಿಕಾ ವೆಡ್ಡಿಂಗ್ ರೂಮರ್‌: ನಟ ಚಿರಂಜೀವಿ ಹೇಳೋದೇನು?

ಇದೀಗ ಮತ್ತೆ ಪ್ರಭಾಸ್ ಮ್ಯಾರೇಜ್ ಮ್ಯಾಟರ್‌ ಸದ್ದು ಮಾಡ್ತಿದೆ. ಹಾಗಂತ ಈ ಬಾರಿ ಅವರು ಹೆಸರು ಕೇಳಿ ಬಂದಿದ್ದು ಅನುಷ್ಕಾ ಜತೆಯಲ್ಲ. ಬದಲಾಗಿ ಮೆಗಾಸ್ಟಾರ್ ಚಿರಂಜೀವಿ ಅವರ ಸಹೋದರನ ಮಗಳು ನಿಹಾರಿಕಾ ಜತೆ. ಹೌದು, ಪ್ರಭಾಸ್‌ ಅವರು ನಿಹಾರಿಕಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಕೇಳಿ ಬರುತ್ತಿತ್ತು. ಪ್ರಭಾಸ್ ಮದುವೆ ವಿಚಾರ ಅವರ ಅಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿತ್ತು. ಆದರೆ, ರೂಮರ್‌ನ್ನು ನಟ ಚಿರಂಜೀವಿ ತಳ್ಳಿ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ಅವರು ನಿಹಾರಿಕಾ ಸದ್ಯ ಅವಳ ಚಿತ್ರಗಳ ಮೇಲೆ ಗಮನ ಹರಿಸಿದ್ದಾಳೆ. ಸದ್ಯಕ್ಕಂತು ಅವಳ ಮದುವೆ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.        

short by Pawan / read more at Eenadu India

Comments