Skip to main content


ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ "ಕೆಜಿಎಫ್" ಮೇಕಿಂಗ್ ಸ್ಟಿಲ್ಸ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ "ಕೆಜಿಎಫ್' ಚಿತ್ರದ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಿನಿಪ್ರಿಯರಿಗೆ ಸಕ್ಕತ್ ಖುಷಿ ತಂದಿದೆ.

ಚಿತ್ರಕ್ಕಾಗಿ ಕೋಲಾರದ ಕೆಜಿಎಫ್'ನಲ್ಲಿ ಹಾಕಿರುವ ಸೆಟ್'ಗಳು, ಯಶ್ ಅವರ ಗೆಟಪ್, ಉಪಯೋಗಿಸಿರುವ ಕಾರು, ಬಳಸಿರುವ ಬೈಕ್ ಹಾಗೂ ದೊಡ್ಡ ದೇವರ ಮೂರ್ತಿ ಜೊತೆಗೆ ಗುಹೆಯಂತಿರುವ ಸೆಟ್ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆಯನ್ನು ಹುಟ್ಟು ಹಾಕುವಂತೆ ಮಾಡಿದೆ.

ಸದ್ಯಕ್ಕೆ ಯಶ್ ಚಿತ್ರಕ್ಕಾಗಿ ಗಡ್ಡ ಬಿಟ್ಟು ಕೊಟ್ಟಿರುವ ಖಡಕ್ ಲುಕ್ ಅವರ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದು, ಚಿತ್ರ ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ. ಹೊಂಬಾಳೆ ಬ್ಯಾನರ್‌ನಲ್ಲಿ ವಿಜಯ್‌ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಯಶ್‌ ಅವರಿಗೆ ನಾಯಕಿಯಾಗಿ ಶ್ರೀನಿಧಿ ಇದ್ದಾರೆ.   

short by Pawan / read more at Udayavani

Comments