Skip to main content


"ಗುಳ್ಟು" ಚಿತ್ರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ರಾಕಿಂಗ್ ಸ್ಟಾರ್ ಯಶ್

ವಿಭಿನ್ನ ಟೈಟಲ್ ನ ‘ಗುಳ್ಟು’ ಚಿತ್ರ ಮಾರ್ಚ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತಂತ್ರಜ್ಞಾನ ಬೆಳೆದಂತೆ ಹೇಗೆಲ್ಲ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಿದ್ದಾರೆ ನಿರ್ದೇಶಕರಾದ ಜನಾರ್ಧನ್ ಚಿಕ್ಕಣ್ಣ. ಈ ಚಿತ್ರವನ್ನ ನೋಡಿದ ಪ್ರೇಕ್ಷಕರು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಇನ್ನೂ ರಾಕಿಂಗ್ ಸ್ಟಾರ್ ಯಶ್ ಕೂಡ ಸಿನಿಮಾವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಗುಳ್ಟು’ ಚಿತ್ರವನ್ನು ಹೊಸಬರ ತಂಡವೊಂದು ನಿರ್ಮಿಸಿದ್ದು, ನವೀನ್ ಶಂಕರ್ ಎಂಬುವವರು ನಾಯಕನಾಗಿ ತೆರೆ ಮೇಲೆ ಕಮಾಲ್ ಮಾಡಿದ್ದಾರೆ. ಜನಾರ್ಧನ್ ಚಿಕ್ಕಣ್ಣ ಎಂಬುವವರು ಚಿತ್ರ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ನಟಿ ಸೋನು ಗೌಡ, ಅವಿನಾಶ್, ರಂಗಾಯಣ ರಘು ನಟಿಸಿದ್ದಾರೆ.

short by: Nithin / read more at Kannadanewsnow

Comments