Skip to main content


ಕಾಗೇ ಬಂಗಾರ ಸಿನಿಮಾ ಕೈಬಿಟ್ಟ ಸೂರಿ

ಸೂರಿ ನಿರ್ದೇಶಿಸಿ ಶಿವರಾಜ್ ಕುಮಾರ್ ನಟಿಸಿದ್ದ ಟಗರು ಸಿನಿಮಾ ಬಿಡುಗಡೆಯಾಗಿ ಅದ್ಬುತ ಯಶಸ್ಸು ಪಡೆಯುತ್ತಿದೆ, ಹೀಗಾಗಿ ಸೂರಿ ಮುಂದಿನ ಪ್ರಾಜೆಕ್ಟ್ ಗಾಗಿ ಕಾಯುತ್ತಿದ್ದಾರೆ. ಕೆಂಡಸಂಪಿಗೆ ಸಿನಿಮಾ ಮುಂದುವರಿದ ಭಾಗವಾದ ಕಾಗೆ ಬಂಗಾರ ಜೊತೆ ಸೂರಿ ಬರುತ್ತಾರೆ ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು, ಟಗರು ನಂತರ ಕಾಗೆ ಬಂಗಾರ ಪ್ರಾಜೆಕ್ಟ್ ಕೈಗೊಳ್ಳಲು ಸೂರಿ ಕೂಡ ನಿರ್ಧರಿಸಿದ್ದರು. ಆದರೆ ತುಂಬಾ ಯೋಚಿಸಿದ ನಂತರ ಪ್ರಾಜೆಕ್ಟ್ ಕೈ ಬಿಡಲು ನಿರ್ಧರಿಸಿರುವ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಅನಿವಾರ್ಯ ಕಾರಣಾಂತರಗಳಿಂದ ನಾನು ಕಾಗೆ ಬಂಗಾರ ಪ್ರಾಜೆಕ್ಟ್ ಮಾಡುತ್ತಿಲ್ಲ ಇದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರಂತೆ. ಕಾಗೆ ಬಂಗಾರ ಪ್ರಾಜೆಕ್ಟ್ ಕೈ ಬಿಡಲು ಡಿ ಮಾನಿಟೈಸೇಶನ್ ಕಾರಣ ಎಂದು ಸೂರಿ ಹೇಳಿದ್ದಾರೆ. ೨೦೧೫ ರಲ್ಲಿ ತೆರೆ ಕಂಡ ಕೆಂಡಸಂಪಿಗೆ ೨ನೇ ಭಾಗವಾಗಿ ಕಾಗೆ ಬಂಗಾರ ತಯಾರಾಬೇಕಿತ್ತು, ಚಿತ್ರದ ಕೊನೆಯಲ್ಲಿ ೪೦ ಕೋಟಿ ರು ಹಣವನ್ನು ಬಾವಿಗೆ ಸುರಿಯಲಾಗುತ್ತದೆ. ಆದರೆ ಆ ವಿಷಯ ಈಗ ಅಪ್ರಸ್ತುತ ಎನ್ನಿಸುತ್ತದೆ. ದುರಾದೃಷ್ಠವಶಾತ್ ವೀಕ್ಷಕರ ಗಮನವನ್ನು ಪುನಾರವರ್ತಿಸಲು ನನ್ನಿಂದ ಸಾಧ್ಯವಿಲ್ಲ, ಹಾಗಾಗಿ ನಾನು ಈ ಪ್ರಾಜೆಕ್ಟ್ ಕೈಬಿಟ್ಟಿದ್ದಾಗಿ ಹೇಳಿದ್ದಾರಂತೆ.   

short by Pawan / read more at Balkani News

Comments