Skip to main content


ಓಂ ಪ್ರಕಾಶ್ ರಾವ್ ೫೦ನೇ ಚಿತ್ರಕ್ಕೆ ಶಿವಣ್ಣ ನಾಯಕ? ಸಂಜಯ್ ದತ್ ಖಳನಾಯಕ?

'ಎಕೆ.47', 'ಲಾಕಪ್ ಡೆತ್', 'ಹುಚ್ಚ', 'ಸಿಂಹದ ಮರಿ', 'ಕಲಾಸಿಪಾಳ್ಯ', 'ಮಂಡ್ಯ', 'ಪಾರ್ಥ', ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ಓಂ ಪ್ರಕಾಶ್ ರಾವ್ ತಮ್ಮ 50ನೇ ಚಿತ್ರವನ್ನ ವಿಶೇಷವಾಗಿರಿಸಲು ಸಿದ್ದತೆ ನಡೆಸಿದ್ದಾರೆ. ಹೌದು, ತಮ್ಮ ಹಾಫ್ ಸೆಂಚುರಿ ಚಿತ್ರಕ್ಕೆ ಶಿವಣ್ಣನನ್ನ ನಾಯಕನನ್ನಾಗಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಚಿತ್ರಕ್ಕೆ 'ತ್ರಿವಿಕ್ರಮ' ಎಂದು ಟೈಟಲ್ ಕೂಡ ಇಡಲಾಗಿದೆ. ವಿಶೇಷ ಅಂದ್ರೆ, ಶಿವಣ್ಣ ಮತ್ತು ಓಂ ಪ್ರಕಾಶ್ ಜೋಡಿಯ ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರನ್ನ ವಿಲನ್ ಆಗಿಸಲು ತಯಾರಿ ನಡೆಸಿದ್ದಾರಂತೆ. ಶಿವಣ್ಣ ಹಾಗೂ ಸಂಜಯ್ ದತ್ ಇದೆ ಮೊದಲ ಬಾರಿ ತೆರೆ ಹಂಚಿಕೊಳ್ಳುತ್ತಿದ್ದಾರೆ ಹಿಗಾಗೀ ಈ ಸಿನೆಮಾ ಚಂದನವನ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

short by : Nithin

Comments