Skip to main content


ಇಷ್ಟು ದಿನ ಸೈಲೆಂಟ್ ಆಗಿದ್ದ ಉಪೇಂದ್ರ ಬಗ್ಗೆ ಈಗ ಬಂದಿದೆ ಹೊಸ ಬ್ರೇಕಿಂಗ್ ನ್ಯೂಸ್ !

ಕರ್ನಾಟಕದಲ್ಲಿ ಎಲ್ಲಿ ಕೇಳಿದರು ಈಗ ಚುನಾವಣೆಯದ್ದೇ ಸುದ್ದಿ. ಆದರೆ ನಟ ಉಪೇಂದ್ರ ಮಾತ್ರ ಚುನಾವಣೆಯ ಬಗ್ಗೆ ಯಾವ ತಯಾರಿ ಮಾಡಿಕೊಂಡಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಉಪೇಂದ್ರ ಈ ಬಾರಿ ಚುನಾವಣೆಗೆ ನಿಲ್ಲುತ್ತಾರಾ ಎನ್ನುವುದು ಸಹ ಸ್ಪಷ್ಟವಾಗಿ ತಿಳಿದಿಲ್ಲ.
ಭಿನ್ನಾಭಿಪ್ರಾಯದಲ್ಲಿ KPJP ಪಕ್ಷದಿಂದ ಹೊರ ಬಂದ ಉಪೇಂದ್ರ 'ಪ್ರಜಾಕೀಯ' ಹೆಸರಿನಲ್ಲಿ ಹೊಸ ಪಕ್ಷ ಶುರು ಮಾಡುವುದಾಗಿ ಹೇಳಿದ್ದರು. ಆದರೆ ಇಲ್ಲಿಯವರೆಗೆ ಆ ಬಗ್ಗೆ ಉಪ್ಪಿ ಮತ್ತೆ ಮಾತನಾಡಿಲ್ಲ. ರಾಜಕೀಯ ರಂಗಕ್ಕೆ ಧುಮುಕಿದ್ದ ಉಪೇಂದ್ರ ಸಿನಿಮಾ ಕೆಲಸಗಳಿಂದ ದೂರ ಇದ್ದರು. ಆದರೆ ಸದ್ಯದ ಸುದ್ದಿಯ ಪ್ರಕಾರ ಉಪೇಂದ್ರ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರಂತೆ. ಈಗ ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರಗಳನ್ನು ಉಪೇಂದ್ರ ನಿಭಾಯಿಸಲಿದ್ದಾರಂತೆ. ಉಪೇಂದ್ರ ರಾಜಕೀಯಕ್ಕೆ ಹೋಗುವ ಮುನ್ನ ಅವರ 'ಹೋಮ್ ಮಿನಿಸ್ಟರ್' ಸಿನಿಮಾದ ಶೂಟಿಂಗ್ ನಡೆಯುತಿತ್ತು. ಈಗ ಈ ಚಿತ್ರದ ಎರಡು ಹಾಡಿನ ಚಿತ್ರೀಕರಣ ಬಾಕಿ ಇದ್ದು ಶೀಘ್ರವೇ ಉಪ್ಪಿ ಈ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರಂತೆ.      

short by Pawan / read more at Filmibeat

Comments