Skip to main content


ದರ್ಶನ್ ಸಿನಿಮಾ ನಾಯಕಿಯೊಂದಿಗೆ ಹಾರ್ದಿಕ್ ಪಾಂಡ್ಯ ಡೇಟಿಂಗ್..!!!

ಕ್ರಿಕೆಟ್ ಹಾಗೆ ಸಿನಿಮಾ ಫಿಲ್ಡ್ ಗೆ ದೊಡ್ಡದೊಂದು ಲಿಂಕ್ ಇದೆ.. ಹೀಗಾಗೆ ಸಿನಿಮಾ ಸ್ಟಾರ್ ಗಳನ್ನ ಲವ್ ಮಾಡೋದು ಮದುವೆ ಆಗೋದು ಕಾಮನ್ ಆಗಿಬಿಟ್ಟಿದೆ.. ಇಲ್ಲಿ ಸಿಗುವ ಗಾಸಿಪ್ ಗಳಿಗೆ ಬ್ರೇಕ್ ಅಪ್ ಗಳಿಗೆ ಲೆಕ್ಕವೇ ಇಲ್ಲ.. ‌ ಹೀಗಾಗೆ ಹಲವು ಕ್ರಿಕೆಟರ್ ಗಳ ಸುತ್ತ ಒಂದಿಲ್ಲೊಂದು ಈ ರೀತಿ ಸ್ಟೋರಿ‌ ಇದ್ದೆ ಇರುತ್ತೆ. ಈ ಹಿಂದೆ ಬಿಗ್ ಬಾಸ್ ಷೋ ನ ಮೂಲಕ‌ ಸುದ್ದಿಯಾಗಿದ್ದ ಎಲಿ ಅರ್ವಾಮ್ ಜೊತೆಗೆ ಹಾರ್ದಿಕ್ ಹೆಸರು ಕೇಳಿ‌ ಬಂದಿತ್ತು. ಇದು ದೊಡ್ಡಮಟ್ಟದಲ್ಲಿ ಸುದ್ದಿಯಾಗ್ತಿದ್ದ ಹಾಗೆ ಈ ಜೋಡಿಗಳಿಬ್ಬರು ಪ್ರೀತಿಗೀತಿ ಏನು ಇಲ್ಲ ಅಂತ ಹೇಳಿ ಗಾಸಿಪ್ ನ ತಳ್ಳಾಕಿದರು. ಆದರೀಗ ಪಾಂಡ್ಯ ಹೆಸರು ಮತ್ತೊಬ್ಬ ಬಾಲಿವುಡ್ ಹಾಗೆ ಕನ್ನಡ ಚಿತ್ರರಂಗಕ್ಕೂ ಪರಿಚಯ ಇರುವ ನಾಯಕಿಯೊಂದಿಗೆ ತಳಕು ಹಾಕಿಕೊಂಡಿದೆ.. ಅದು ಬೇರೆ ಯಾರು ಅಲ್ಲ ಈ ಹಿಂದೆ ದರ್ಶನ್ ಅಭಿನಯದ ಐರಾವತ ಸಿನಿಮಾದ ನಾಯಕಿಯಾಗಿದ್ದ ಊರ್ವಶಿ ರೌಟಲ್ ಜೊತೆಗೆ. ಹೌದು‌ ಹಾರ್ದಿಕ್ ಪಾಂಡ್ಯ ಹಾಗೆ ಮಾಡೆಲ್ ಕಂ ನಟಿಯಾಗಿರೋ ಊರ್ವಶಿ ನಡುವೆ ಕುಚ್ ಕುಚ್ ಶುರುವಾಗಿದ್ಯಂತೆ.. ಇಂತಹದೊಂದು ಸುದ್ದಿ ಬಿ-ಟೌನ್ ನಲ್ಲಿ ಓಡಾಡಿದ್ದು, ಇದಕ್ಕೂ ಈ ಇಬ್ಬರ ಕಾರಣವಾಗಿದ್ದಾರೆ.          

short by Prajwal / more at Dailyhunt

Comments