Skip to main content


ಭಾರತೀಯರ ಪದಕ ಬೇಟೆ ನಿರಂತರ, ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಭಡ್ತಿ

ಶೂಟಿಂಗ್ ನಲ್ಲಿ ಜಿತು ರಾಯ್ ಅವರ ಚಿನ್ನದ ಬೇಟೆ, ಮಿಶ್ರ ಬ್ಯಾಡ್ಮಿಂಟನ್ ಮತ್ತು ಪುರುಷರ ಟೇಬಲ್ ಟೆನ್ನಿಸ್ ತಂಡಗಳು ಮಾಡಿದ ಐತಿಹಾಸಿಕ ಸಾಧನೆಗಳಿಂದ 21 ನೇ ಕಾಮನ್ವೆಲ್ತ್ ಕ್ರೀಡಾಕೂಟದ 5ನೇ ದಿನ ಭಾರತದ ಪಾಲಿಗೆ ಸ್ಮರಣೀಯವಾಗಿದೆ.ವೇಟ್ ಲಿಫ್ಟಿಂಗ್ ಸ್ಪರ್ಧೆಯ ಅಂತಿಮ ದಿನವಾದ ಇಂದು ಭಾರತದ ಪ್ರದೀಪ್ ಸಿಂಗ್ (105 ಕೆಜಿ) ಬೆಳ್ಳಿ ಪದಕ ಗಳಿಸುವ ಮೂಲಕ ಅಭಿಯಾನವನ್ನು ಮುಗಿಸಿದ್ದಾರೆ. ಇದರೊಡನೆ ಭಾರತ ವೇಟ್ ಲಿಫ್ಟಿಂಗ್ ನಲ್ಲಿ ಐದು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗಳಿಸಿಕೊಂಡಿದೆ.ಒಟ್ಟಾರೆ ಪದಕ ಪಟ್ಟಿಯಲ್ಲಿ ಭಾರತವು 10 ಚಿನ್ನ, ನಾಲ್ಕು ಬೆಳ್ಳಿ ಮತ್ತು ಐದು ಕಂಚಿನ ಪದಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ.10 ಮಿ ಏರ್ ಪಿಸ್ತೂಲ್ ಶೂಟಿಂಗ್ ಪಂದ್ಯದಲ್ಲಿ ಜಿತು ಚಿನ್ನದ ಪದಕ ಗೆದ್ದು ಬೀಗಿದ್ದಾರೆ.

short by: Nithin / read more at KannadaPrabha


Comments