Skip to main content


ಯಶ್ ಗಿದೆ ಹೀಗೊಂದು ಆಸೆ!! ಯಾವಾಗ ಈಡೇರುತ್ತೋ..?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆ ಜೊತೆಗೆ ತಮ್ಮದೇ ಪ್ರೊಡಕ್ಷನ್ ಹೌಸ್ ಶುರು ಮಾಡಿರೋದು ನಿಮಗೆಲ್ಲ ಗೊತ್ತೇ ಇದೆ. ತಮ್ಮ ತಮ್ಮ ಪ್ರೊಡಕ್ಷನ್ ಹೌಸ್ ಮುಖಾಂತರ ಹೊಸಬರಿಗೆ, ಯುವ ಪ್ರತಿಭೆಗಳಿಗೆ ಸ್ಟಾರ್ ನಟರು ಪ್ರೋತ್ಸಾಹ ನೀಡುತ್ತಿದ್ದಾರೆ. ಈಗ ಇವರದ್ದೇ ಹಾದಿಯಲ್ಲಿ ಸಾಗಲು ಯಶ್ ಕೂಡ ಮನಸ್ಸು ಮಾಡಿದ್ದಾರೆ. ಹೌದು, ಸ್ವಂತ ಪ್ರೊಡಕ್ಷನ್ ಹೌಸ್ ಶುರು ಮಾಡುವ ಆಸೆ ರಾಕಿಂಗ್ ಸ್ಟಾರ್ ಯಶ್ ಗಿದೆ. ಹಾಗಂತ ಸ್ವತಃ ಯಶ್ ಫೇಸ್ ಬುಕ್ ಲೈವ್ ನಲ್ಲಿ ಹೇಳಿದರು. ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ, ''ಪ್ರೊಡಕ್ಷನ್ ಕಂಪನಿ ಓಪನ್ ಮಾಡಬೇಕು ಅಂತ ಒಂದು ಆಸೆ ಇದೆ. ಹೊಸಬರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಖಂಡಿತ ಪ್ರೊಡಕ್ಷನ್ ಕಂಪನಿ ಓಪನ್ ಮಾಡ್ತೀನಿ. ನಮ್ಮ ಪ್ರೊಡಕ್ಷನ್ ಕಂಪನಿ ಇಂದಲೇ ನನ್ನ ಸಿನಿಮಾ ಮಾಡಬೇಕು ಎನ್ನುವ ಪ್ಲಾನ್ ಕೂಡ ಇದೆ'' ಎಂದರು ನಟ ಯಶ್.    

short by Pawan / read more at Filmibeat

Comments