Skip to main content


ಮದುವೆ ಆದ ಮೇಲೂ ಮಹಿಗೆ ವಿವಾಹ ಪ್ರಸ್ತಾಪ!

ಭಾರತೀಯ ಕ್ರಿಕೆಟ್ ತಂಡದ ಮಾಜಿ ಯಶಸ್ವಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಎಷ್ಟೊಂದು ಬೃಹತ್ ಅಭಿಮಾನಿಗಳ ಬಳಗ ಹೊಂದಿದ್ದಾರೆ ಎಂಬುದನ್ನು ವಿಶೇಷವಾಗಿ ಉಲ್ಲೇಖಿಸಬೇಕಾದ ಅಗತ್ಯವಿಲ್ಲ. ಅಂದಹಾಗೆ, ಮಾಹಿಗೆ ಮದುವೆಯಾಗಿ ಒಂದು ಮಗು ಆಗಿರುವ ಬಳಿಕವೂ ಬೆನ್ನ ಹಿಂದೆ ಬಿದ್ದಿರುವ ಹುಡುಗಿಯರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಇದಕ್ಕೊಂದು ತಾಜಾ ಉದಾಹರಣೆಯೆಂಬಂತೆ ಯುವತಿಯೊಬ್ಬಾಕೆ IPL ಲೀಗ್ ಪಂದ್ಯದ ವೇಳೆ ಮಾಹಿಗೆ ತಮ್ಮ ಭವಿಷ್ಯದ ಜತೆಗಾರನಲ್ಲಿ ಕ್ಷಮೆಯಾಚಿಸುವೆ, ಯಾವತ್ತಿದ್ರೂ ಮಾಹಿಯೇ ನನ್ನ ಮೊದಲ ಲವ್ ಎಂದು ಪೋಸ್ಟರೊಂದರಲ್ಲಿ ಮನದಾಳದ ಮಾತುಗಳನ್ನಾಡಿದ್ದಾರೆ. 

short by Shraman / more at Vijaya Karnataka


Comments