Skip to main content


ಆರ್.ಸಿ.ಬಿ ತಂಡಕ್ಕೆ ಉತ್ಸಾಹ ತುಂಬಿದ ಅಭಿಮಾನಿಗಳು!

ಸರಿ ಸುಮಾರು 5.5 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಫ್ಯಾನ್ ಪೇಜ್ ನ ಸದಸ್ಯರು ಒಂದೆಡೆ ಸೇರಿದ್ದರು. ನಮ್ಮ ಟೀಮ್ ಆರ್ ಸಿಬಿ ಫ್ಯಾನ್ ಪೇಜ್ ನ ಸದಸ್ಯರು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಸೇರಿಕೊಂಡು, ತಮ್ಮ ನೆಚ್ಚಿನ ತಂಡಕ್ಕೆ ಶುಭ ಹಾರೈಸಿದರು. 'ಈ ಸಲ ಕಪ್ ನಮ್ದೆ' ಎಂಬ ಮಂತ್ರ ಎಲ್ಲೆಡೆ ಮೊಳಗುತ್ತಿದೆ. ಆರ್ ಸಿಬಿಯ ಅಧಿಕೃತ ಜರ್ಸಿ ತೊಟ್ಟ ಯುವಕ, ಯುವತಿಯರು ಗೇಟ್ ನಂ 17ರ ಬಳಿ ಸೇರಿ ಆರ್ ಸಿಬಿ ಪರ ಘೋಷಣೆಗಳನ್ನು ಕೂಗಿದರು. ಇದು ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 11) ಆರಂಭಕ್ಕೂ ಮುನ್ನ ಫ್ಯಾನ್ಸ್ ಮೀಟ್ ಇದಾಗಿದೆ.
short by Shraman Jain / read more at Newzly