Skip to main content


ಐಪಿಎಲ್ ನಲ್ಲಿ ಮಿಂಚಿದ ಪತಿ: ಕಾಮನ್ವೆಲ್ತ್ ನಲ್ಲಿ ನಿರಾಸೆ ಮೂಡಿಸಿದ ಪತ್ನಿ

ಒಂದು ಕಡೆ ಐಪಿಎಲ್ ಹಬ್ಬ ಶುರುವಾಗಿದೆ. ಇನ್ನೊಂದು ಕಡೆ ಕಾಮನ್ ವೆಲ್ತ್ ಗೇಮ್ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಕ್ರೀಡಾ ಪ್ರೇಮಿಗಳು ಎರಡೂ ಕಡೆ ಕಣ್ಣಿಟ್ಟಿದ್ದಾರೆ. ಭಾರತಕ್ಕೆ ಯಾವ ಸ್ಪರ್ಧೆಯಲ್ಲಿ ಯಾವ ಪದಕ ಬಂತು ಎಂಬುದರ ಜೊತೆಗೆ ಐಪಿಎಲ್ ನಲ್ಲಿ ಯಾರು ಗೆಲುವು ಸಾಧಿಸಿದ್ರು ಎಂಬುದನ್ನು ನೋಡ್ತಿದ್ದಾರೆ. ಈ ಮಧ್ಯೆ ಐಪಿಎಲ್ ಹಾಗೂ ಕಾಮನ್ವೆಲ್ತ್ ನ ಜೋಡಿಯೊಂದು ಎಲ್ಲರ ಗಮನ ಸೆಳೆದಿದೆ. ಈ ಕ್ರೀಡಾ ಜೋಡಿಗೆ ಒಂದು ಕಡೆ ಖುಷಿಯಿದ್ರೆ ಇನ್ನೊಂದು ಕಡೆ ನೋವು. ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ಮಧ್ಯೆ ನಡೆದ ಪಂದ್ಯದಲ್ಲಿ ಕೆಕೆಆರ್ ಗೆದ್ದು ಬೀಗಿದೆ. ಕೊಲ್ಕತ್ತಾ ಹೊಸ ನಾಯಕ ದಿನೇಶ್ ಕಾರ್ತಿಕ್ ನೇತೃತ್ವದ ತಂಡ ಕೊಹ್ಲಿ ಪಡೆಗೆ ಸೋಲಿನ ಕಹಿಯುಣಿಸಿದೆ. ಇದು ದಿನೇಶ್ ಕಾರ್ತಿಕ್ ಗೆ ಖುಷಿ ತಂದ ವಿಚಾರ. ಆದ್ರೆ ಅತ್ತ ಕಾಮನ್ ವೆಲ್ತ್ ಗೇಮ್ ನಲ್ಲಿ ಪತ್ನಿ ಸೋಲುಂಡಿದ್ದಾರೆ. ಸ್ಕ್ವಾಶ್ ಆಟಗಾರ್ತಿ ದೀಪಿಕಾ ಪಿಳ್ಳಿಕಲ್ ಸಿಂಗಲ್ಸ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.      

Short by Prajwal / read more at Kannadadunia

Comments