Skip to main content


ಮಂಜುನಾಥನ ದರ್ಶನ ಪಡೆದ ದರ್ಶನ್

ಸಾಮಾನ್ಯವಾಗಿ ನಟರು ಸಿನಿಮಾ ಬ್ಯುಸಿ ಅಂತಾ ದೇವಸ್ಥಾನಗಳಿಗೆ ಹೋಗೋದು ಕಡಿಮೆ. ಅದರಲ್ಲೂ ಕೆಲವೊಮ್ಮೆ ಬಿಡುವು ಮಾಡಿಕೊಂಡು ಹೋಗಿರುತ್ತಾರೆ. ಇದೀಗ ದರ್ಶನ್ ದೇವಸ್ಥಾನಕ್ಕೆ ಹೋಗಿ ಬಂದಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೌದು, ಚಾಲೆಂಜಿಂಗ್ ಸ್ಟಾರ್ ದರ್ಶನ್​, ಸದ್ಯಕ್ಕೆ ಸ್ಯಾಂಡಲ್​ ವುಡ್ ​ನ ಹಾಟ್​ ಟಾಪಿಕ್​. ಒಂದೆಡೆ 'ಕುರುಕ್ಷೇತ್ರ'ದ ಹವಾ, ಮತ್ತೊಂದೆಡೆ ಯಜಮಾನನ ಖದರ್​ ನಿಂದ ದರ್ಶನ್​ ತುಂಬಾ ಬ್ಯುಸಿಯಾಗಿದ್ದಾರೆ. ಪಿ.ಕುಮಾರ್​ ನಿರ್ದೇಶನದ ಯಜಮಾನ ಚಿತ್ರದ ಶೂಟಿಂಗ್​ ಭರದಿಂದ ಸಾಗುತ್ತಿದೆ. ಕಳೆದ ತಿಂಗಳು ಮೈಸೂರಿನ ಸುತ್ತಮುತ್ತ ಶೂಟಿಂಗ್​ ಮುಗಿಸಿ ಬಂದಿದ್ದ ಚಿತ್ರತಂಡ, ಈಗ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ. ಇನ್ನು, ಇದೇ ಗ್ಯಾಪ್ ​ನಲ್ಲಿ ಚಾಲೆಂಜಿಂಗ್ ಸ್ಟಾರ್​ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದು ಬಂದಿದ್ದಾರೆ. ಇನ್ನು ಸ್ನೇಹಿತರಾದ ಧನಂಜಯ್​ ಅಲಿಯಾಸ್ ಡಾಲಿ, ಸೃಜನ್​ ಲೋಕೇಶ್​ ಮುಂತಾದವರು ದರ್ಶನ್​ಗೆ ಸಾಥ್ ನೀಡಿದ್ದಾರೆ.         

short by Pawan / read more at Balkani News

Comments