Skip to main content


ಭಾರತ ವಿಶ್ವಕಪ್‌ ಗೆದ್ದು ಇಂದಿಗೆ ಏಳು ವರ್ಷ: ಟ್ವಿಟರ್‌ನಲ್ಲಿ ನೆನಪಿನ ಮೆರವಣಿಗೆ

ಭಾರತ ಕ್ರಿಕೆಟ್‌ ತಂಡ ವಿಶ್ವಕಪ್‌ ಗೆದ್ದು ಇಂದಿಗೆ ಏಳು ವರ್ಷ ಕಳೆದಿದೆ. ಆ ದಿನದ ರೋಮಾಂಚಕ ಕ್ಷಣಗಳನ್ನು ಕ್ರೀಡಾಭಿಮಾನಿಗಳು, ಕ್ರಿಕೆಟಿಗರು ಟ್ವಿಟರ್‌ನಲ್ಲಿ ಮೆಲುಕು ಹಾಕಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ), ಕ್ರಿಕೆಟಿಗ ಸುರೇಶ್‌ ರೈನಾ, ವಿರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿ ಸಂತಸ ಹಂಚಿಕೊಂಡಿದ್ದಾರೆ.  2011ರ ಏ. 2ರಂದು ಭಾರತ –ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಆರು ವಿಕೆಟ್‌ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ 50 ಓವರ್‌ಗಳಲ್ಲಿ 6 ಕಳೆದುಕೊಂಡು 274 ರನ್ ಗಳಿಸಿತ್ತು. 275 ರನ್‌ ಗುರಿ ಬೆನ್ನತ್ತಿದ ಭಾರತ ಗೌತಮ್‌ ಗಂಭೀರ್‌ ಹಾಗೂ ನಾಯಕ ಎಂ.ಎಸ್‌. ದೋನಿ ಅವರು ಅಮೋಘ ಬ್ಯಾಟಿಂಗ್‌ ನೆರವಿನಿಂದ 10 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತ್ತು.          
Short by Prajwal / read more at Prajavani