Skip to main content


ಜೈಲಿನ ಊಟವೂ ಬೇಡ, ಹೊರಗಡೆಯ ಊಟವೂ ಬೇಡ ಎಂದ ಸಲ್ಮಾನ್

ಕೃಷ್ಣಮೃಗ ಭೇಟೆಯಾಡಿದ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಸಲ್ಮಾನ್ ಖಾನ್ ಮೊದಲ ದಿನ ಯಾವುದೇ ಆಹಾರ ಸೇವಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಜೈಲಿನ ಮೊದಲ ರಾತ್ರಿ ಊಟ ದಾಲ್ ರೋಟಿಯನ್ನು 52 ವರ್ಷದ ಸಲ್ಮಾನ್ ಖಾನ್ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ಹೊರಗಿನಿಂದಲೂ ಊಟವನ್ನು ತರಿಸಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ. ಜೈಲಿಗೆ ಬಂದಾಗ ಸಲ್ಮಾನ್‍ಗೆ ರಕ್ತದ ಒತ್ತಡ ಹೆಚ್ಚಾಗಿತ್ತು. ಸ್ವಲ್ಪ ಸಮಯದ ನಂತರ ದೇಹ ಸಹಜ ಸ್ಥಿತಿಗೆ ಮರಳಿತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಜೈಲಿನ ಅಧೀಕ್ಷಕ ವಿಕ್ರಮ್ ಸಿಂಗ್ ತಿಳಿಸಿದರು. 

short by Pawan / read more at Public Tv

Comments