Skip to main content


ಡಾ. ರಾಜ್ ಪುಣ್ಯಸ್ಮರಣೆಗೂ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ

ವರನಟ ಡಾ. ರಾಜ್‍ಕುಮಾರ್ 12ನೇ ವರ್ಷದ ಪುಣ್ಯ ಸ್ಮರಣೆಗೆ ನೀತಿ ಸಂಹಿತೆ ಎಫೆಕ್ಟ್ ತಟ್ಟಿದೆ. ನಾಳೆ ಡಾ. ರಾಜ್ ಪುಣ್ಯಭೂಮಿಯಲ್ಲಿ ಸರಳವಾಗಿ ಪುಣ್ಯಸ್ಮರಣೆ ಆಚರಿಸಲು ಕಂಠೀರವ ಸ್ಟುಡಿಯೋ ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ.

ರಾಜ್‍ಕುಮಾರ್ ಅವರ ಪುಣ್ಯ ಸ್ಮರಣೆ ದಿನದಂದು ಪ್ರತಿವರ್ಷ ಸುಮಾರು 3 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ ಬಂದಿರುವುದರಿಂದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಶಾಮಿಯಾನ, ಊಟದ ವ್ಯವಸ್ಥೆ ಇಲ್ಲದೆ ಮಾಡಲಾಗುತ್ತಿದೆ. ಅಲ್ಲದೇ ಸರಳವಾಗಿ ಪುಣ್ಯಸ್ಮರಣೆ ಆಚರಣೆ ನಿರ್ಧಾರ ಮಾಡಲಾಗಿದೆ.            

short by NP / read more at Public TV

Comments