Skip to main content


ಹನಿಮೂನ್ ಬಿಟ್ಟು ಮೈದಾನಕ್ಕೆ ಬಂದು ಸೊನ್ನೆ ಸುತ್ತಿದ ಫಿಂಚ್

ಆಸ್ಟ್ರೇಲಿಯಾದ ಅಟಗಾರ ಅರೋನ್ ಫಿಂಚ್ ಈ ಬಾರಿ ಕಿಂಗ್ಸ್ XI ಪಂಜಾಬ್ ಪರ ಆಡುತ್ತಿದ್ದು, ಮದುವೆಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2018ರ ಮೊದಲ ಪಂದ್ಯ ಮಿಸ್ ಮಾಡಿಕೊಂಡಿದ್ದರು. ಆದರೆ, ಈಗ ಮದುವೆ ನಂತರ ಮಧುಚಂದ್ರಕ್ಕೆ ತೆರಳದೆ ನೇರವಾಗಿ ಭಾರತಕ್ಕೆ ಬಂದು, ಕ್ರಿಕೆಟ್ ಮೈದಾನಕ್ಕಿಳಿದಿದ್ದಾರೆ. ಫಿಂಚ್ ಅವರ ತ್ಯಾಗಕ್ಕೆ ಬೆಲೆ ಸಿಕ್ಕು, ಆರ್ ಸಿಬಿ ವಿರುದ್ಧ ಅಡುವ ಅವಕಾಶ ಸಿಕ್ಕಿತ್ತು. ಆದರೆ, ಶೂನ್ಯ ಸುತ್ತಿ ಪೆವಿಲಿಯನ್ ಗೆ ತೆರಳಿ, ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. ಆರೋನ್ ಫಿಂಚ್ ಅವರು ಏಪ್ರಿಲ್ 07ರಂದು ಮದುವೆಯಾಗಿದ್ದು, ನಂತರ ನೇರವಾಗಿ ಐಪಿಎಲ್ ಗೆ ಬಂದಿದ್ದರು. ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ಆರಂಭಿಕ ಆಟಗಾರನಾಗಿ ಇಳಿಯಬೇಕಿದ್ದ ಆರೋನ್ ಫಿಂಚ್ ಅವರು ಮೊದಲ ವಿಕೆಟ್ ಪತನದ ನಂತರ ಕ್ರೀಸ್ ಗೆ ಬಂದರು. ಆದರೆ, ಆರ್ ಸಿಬಿ ಬೌಲರ್ ಉಮೇಶ್ ಯಾದವ್ ಎಸೆತ ಅರಿಯಲಾರದೆ ಎಲ್ ಬಿ ಯಾದರು.              

short by Prajwal / read more at Oneindia

Comments