Skip to main content


ಸೂರಿ ಮುಂದಿನ ಚಿತ್ರಕ್ಕೆ ಧನಂಜಯ್ ಹೀರೋ

`ಟಗರು' ಸಿನಿಮಾ 50 ದಿನಗಳನ್ನು ಮುಗಿಸಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಚಿತ್ರದ ನಿರ್ದೇಶಕ ಸೂರಿ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಪ್ರಮುಖವಾಗಿ `ಟಗರು' ನಂತರ ಅವರು `ಕಾಗೆ ಬಂಗಾರ' ಎಂಬ ಚಿತ್ರ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. 'ಕಾಗೆ ಬಂಗಾರ' ಸಿನಿಮಾ ಕಥೆ ಸೆಟ್ ಆಗುತ್ತಿಲ್ಲವಂತೆ. ಅದೇ ಕಾರಣಕ್ಕೆ ಅವರು ಅದನ್ನು ಕೈಬಿಟ್ಟು, ಇನ್ನೆರೆಡು ಕಥೆಗಳನ್ನು ಮಾಡಿದ್ದಾರೆ. ಆ ಪೈಕಿ ಒಂದು ಚಿತ್ರ ಶೀಘ್ರ ಸೆಟ್ಟೇರಲಿದ್ದು, `ಟಗರು' ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಡಾಲಿ ಧನಂಜಯ್, ಈ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ.           

short by NP / more at Eenadu India

Comments