Skip to main content


ಐಸಿಸಿ ರ‍್ಯಾಂಕಿಂಗ್‌: ಎರಡನೇ ಸ್ಥಾನದಲ್ಲಿಯೇ ಉಳಿದ ವಿರಾಟ್‌ ಕೊಹ್ಲಿ

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬುಧವಾರ ಬಿಡುಗಡೆ ಮಾಡಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವಕ್ರಮಾಂಕ ಪಟ್ಟಿಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಕೊಹ್ಲಿ ಒಟ್ಟು 912 ಪಾಯಿಂಟ್ಸ್‌ ಹೊಂದಿದ್ದು, ಚೆಂಡು ವಿರೂಪ ಪ್ರಕರಣದಿಂದ ಇತ್ತೀಚೆಗೆ ಒಂದು ವರ್ಷದ ನಿಷೇಧ ಶಿಕ್ಷೆಗೊಳಗಾಗಿರುವ ಸ್ಮಿತ್  ಕೊಹ್ಲಿಗಿಂತ ಹೆಚ್ಚುವರಿ 17 ಪಾಯಿಂಟ್ಸ್‌ ಹೊಂದಿದ್ದಾರೆ. ಏಳನೇ ಸ್ಥಾನದಲ್ಲಿರುವ ಚೇತೇಶ್ವರ ಪೂಜಾರ ಒಟ್ಟು 810 ಪಾಯಿಂಟ್ಸ್‌ ಹೊಂದಿದ್ದಾರೆ.                  

short by Prajwal / read more at Prajavani

Comments