Skip to main content


ಶೂಟಿಂಗ್ ನಲ್ಲಿ ಚಿನ್ನ, ಬೆಳ್ಳಿ ಗೆದ್ದ ವನಿತೆಯರು, ವೈಟ್ ಲಿಫ್ಟಿಂಗ್ ನಲ್ಲಿ ಮತ್ತೋಂದು ಸ್ವರ್ಣ..

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ ನಲ್ಲಿ ಭಾರತಕ್ಕೆ ಮತ್ತೆ 2 ಪದಕ ಬಂದಿವೆ. ಶೂಟಿಂಗ್ ನಲ್ಲಿ ಭಾರತದ ವನಿತೆಯರು ಚಿನ್ನ ಮತ್ತು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.10 ಮೀ. ಏರ್ ಪಿಸ್ತೂಲ್ ಇವೆಂಟ್ ನಲ್ಲಿ ಭಾರತದ ಮಾನು ಭಾಕೇರ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು, ಇದು ಶೂಟಿಂಗ್ ನಲ್ಲಿ ಮೊದಲ ಚಿನ್ನವಾಗಿದೆ. ಇದೇ ವಿಭಾಗದಲ್ಲಿ ಹೀನಾ ಸಿಧು ಬೆಳ್ಳಿ ಪದಕವನ್ನು ಗಳಿಸಿದ್ದಾರೆ.ಭಾನುವಾರ ಭಾರತಕ್ಕೆ ಶುಭ ದಿನವಾಗಿದೆ. ವೇಯ್ಟ್ ಲಿಫ್ಟರ್ ಪೂನಂ ಯಾದವ್ 69 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದು, ಅದಕ್ಕೆ ಮತ್ತೆ 2 ಪದಕ ಸೇರ್ಪಡೆಯಾಗಿವೆ. ಭಾರತದ ಪದಕಗಳ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ.

short by: Nithin / read more at Kannadadunia