Skip to main content


ಸಮಸ್ಯೆ ಆಲಿಸಲು ಆಟೊ ಏರಿ ಬಂದ ಬಿಎಸ್‌ವೈ!

ಸದಾ ಐಷಾರಾಮಿ ಕಾರಿನಲ್ಲಿ ಓಡಾಡುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಆಟೊ ಏರಿ ಹೊರಟಾಗ ಅವರ ಹಿಂದೆ ಹಲವು ಆಟೊಗಳು ಸರತಿಯಲ್ಲಿ ಹೊರಟವು. ದಾರಿಯುದ್ದಕ್ಕೂ ವಿಜಯದ ‘ವಿ’ ಚಿಹ್ನೆ ತೋರಿಸುತ್ತಾ ಹೊರಟ ಯಡಿಯೂರಪ್ಪ ಅವರನ್ನು ಕಂಡ ಹಾದಿ ಹೋಕರಿಗೆ ಅಚ್ಚರಿ ಮೂಡಿಸಿತ್ತು. ಆದರೆ, ಅವರು ಆಟೊರಿಕ್ಷಾ ಏರಿ ಹೊರಟಿದ್ದು, ಚಾಲಕರ ಕಷ್ಟ– ಸುಖ ವಿಚಾರಿಸಲು. ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು. ಕೇಂದ್ರದ ಆಯುಷ್ಮಾನ್‌ ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಚಾಲಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.     

short by NP / read more at Prajavani

Comments