Skip to main content


ಹಾಲಿವುಡ್ ಚಿತ್ರನ ರಿಜೆಕ್ಟ್ ಮಾಡಿದ್ರಾ ಕಿಚ್ಚ ಸುದೀಪ್??

ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಲಿವುಡ್ ಸಿನಿಮಾ ಮಾಡುತ್ತಾರೆ ಎಂದಾಗ ಅವರ ಅಭಿಮಾನಿಗಳು ಮಾತ್ರವಲ್ಲ ಕನ್ನಡದ ಎಲ್ಲ ಸಿನಿಮಾ ಪ್ರೇಮಿಗಳು ಖುಷಿ ಪಟ್ಟರು. ಆದರೆ ಈಗ ಕಿಚ್ಚನ ಹಾಲಿವುಡ್ ಸಿನಿಮಾ ನಿಂತು ಹೋಗಿದೆಯಂತೆ. ಸ್ವತಃ ಸುದೀಪ್ ಈ ಸಿನಿಮಾವನ್ನು ಕೈ ಬಿಟ್ಟಿದ್ದಾರೆ. ಸುದೀಪ್ ತಮಗೆ ಬಂದ ಹಾಲಿವುಡ್ ಸಿನಿಮಾವನ್ನು ಯಾಕೆ ರಿಜೆಕ್ಟ್ ಮಾಡಿದರು ಎನ್ನುವುದಕ್ಕೆ ಒಂದು ಕಾರಣ ಇದೆ. ಸುದೀಪ್ ಅವರ ಈ ಸಿನಿಮಾ ಯಾವಗ ಶುರು ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು ಆದರೆ ಇದುವರೆಗೆ ಸಿನಿಮಾ ಲಾಂಚ್ ಆಗಿಲ್ಲ. ಸುದೀಪ್ ಸದ್ಯ ಕನ್ನಡ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬಿಜಿ ಇದ್ದಾರೆ. ಇಲ್ಲಿಯ ಸಿನಿಮಾಗಳ ನಡುವೆ ಸುದೀಪ್ ಹಾಲಿವುಡ್ ಸಿನಿಮಾ ಮಾಡಲು ಡೇಟ್ ಹೊಂದಾಣಿಕೆ ಆಗುತ್ತಿಲ್ಲವಂತೆ.

short by Shraman Jain / read more at Filmibeat

Comments