Skip to main content


ಇನ್ಮುಂದೆ ಇಂತಹ ಸಿನಿಮಾ ಮಾಡುವ ನಿರ್ದೇಶಕರಿಗೆ ನನ್ನ ಮೊದಲ ಆದ್ಯತೆ: ದರ್ಶನ್

ದರ್ಶನ್ ಕೆಲಸದಲ್ಲಿ ಯಾವಾಗಲೂ ಶಿಸ್ತು ಕಾಪಾಡುತ್ತಾರೆ. ಅಷ್ಟೇ ಅಲ್ಲದೇ ನಿರ್ದೇಶಕರಿಗೆ ಇಷ್ಟೇ ದಿನ ಡೇಟ್ಸ್ ಕೊಡುವುದು ಎಂದು ನಿರ್ಧಾರ ಮಾಡುತ್ತಾರೆ. ಆದರೆ ಕೆಲವೇ ಕೆಲ ನಿರ್ದೆಶಕರಿಗೆ ಚಾಲೆಂಜಿಂಗ್ ಸ್ಟಾರ್ ಮೊದಲ ಆದ್ಯತೆ ಕೊಡುತ್ತೇನೆ ಎಂದು ಹೇಳಿದ್ದಾರೆ. ದರ್ಶನ್ ಅಭಿನಯದ 50 ನೇ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. 50 ನೇ ಚಿತ್ರ ಪೌರಾಣಿಕ ಸಿನಿಮಾ ಆಗಿರುವುದರಿಂದ ಖುಷಿಯಾಗಿದ್ದಾರೆ. ಪೌರಾಣಿಕ ಮತ್ತು ಐತಿಹಾಸಿಕ ಸಿನಿಮಾ ಮಾಡಲು ಬರುವ ನಿರ್ದೇಶಕರಿಗೆ ದರ್ಶನ್ ಮೊದಲ ಆದ್ಯತೆ ನೀಡುತ್ತಾರೆ ಎಂದು ತಿಳಿದು ಬಂದಿದೆ.       

short by NP / read more at Public TV


Comments