Skip to main content


ಆರ್‌ಸಿಬಿ-ಮುಂಬೈ ಪಂದ್ಯದಲ್ಲಿ ಗಂಭೀರ ತಾಂತ್ರಿಕ ಪ್ರಮಾದ!!

ಮಂಗಳವಾರ ಮುಂಬೈ ಮತ್ತು ಆರ್‌ಸಿಬಿ ನಡುವೆ ನಡೆದ ಪಂದ್ಯದಲ್ಲಿ ಗಂಭೀರ ತಾಂತ್ರಿಕ ಪ್ರಮಾದವೊಂದು ಘಟಿಸಿದೆ. ವೇಗಿ ಜಸ್‌ಪ್ರೀತ್‌ ಬುಮ್ರಾ ಎಸೆತದಲ್ಲಿ ಉಮೇಶ್‌ ಯಾದವ್‌ ಔಟಾದಾಗ ತೃತೀಯ ಅಂಪಾಯರ್‌ ವೀಕ್ಷಿಸಿದ ಟೀವಿ ದೃಶ್ಯಾವಳಿಯೇ ಅದಲು ಬದಲಾಗಿತ್ತು! ಇದನ್ನು ಟ್ವೀಟಿಗರು ತತ್‌ಕ್ಷಣ ಪತ್ತೆಹಚ್ಚಿದರು ಎನ್ನುವುದು ಸಮಾಧಾನದ ಸಂಗತಿ. ಇತ್ತೀಚೆಗೆ ಪ್ರತಿಬಾರಿ ಬ್ಯಾಟ್ಸ್‌ಮನ್‌ ಔಟಾದಾಗ ಬೌಲರ್‌ ಎಸೆತ ಸರಿಯಾಗಿದೆಯೇ, ನೋಬಾಲ್‌ ಆಗಿದೆಯೇ ಎಂದು ಪರಿಶೀಲಿಸಲು ತೃತೀಯ ಅಂಪಾಯರ್‌ಗೆ ಮೈದಾನದ ಅಂಪಾಯರ್‌ ಸನ್ನೆ ಮಾಡುತ್ತಾರೆ. ಆರ್‌ಸಿಬಿ ಇನಿಂಗ್ಸ್‌ನ 18ನೇ ಓವರ್‌ನಲ್ಲಿ ಉಮೇಶ್‌ ಯಾದವ್‌ ಔಟಾದಾಗ ಬೌಲರ್‌ ಬುಮ್ರಾ ಪಾದಚಲನೆ ಸರಿಯಾಗಿದೆಯೇ ಎಂದು ತಿಳಿಯಲು ಅಂಪಾಯರ್‌ ಅದನ್ನು ತೃತೀಯ ಅಂಪಾಯರ್‌ಗೆ ಶಿಫಾರಸು ಮಾಡಿದ್ದರು. ಆದರೆ ತೃತೀಯ ಅಂಪಾಯರ್‌ಗೆ ಸಿಕ್ಕ ದೃಶ್ಯಾವಳಿಯೇ ಬೇರೆ. ಇದೀಗ ಐಪಿಎಲ್‌ ಸಂಘಟಕರ ಗಮನಕ್ಕೆ ಬಂದಿದ್ದು ಚರ್ಚೆಗೆ ಕಾರಣವಾಗಿದೆ.         

short by Prajwal / read more at Dailyhunt


Comments