Skip to main content


ಸಾಗರದ ತೀರದಲ್ಲಿ ಗೆಲುವಿನ ಛಲದಲ್ಲಿ...

ಪದಕಗಳ ಕನಸು ಕಾಣುತ್ತ ಗೋಲ್ಡ್ ಕೋಸ್ಟ್ ಗೆ ಬಂದಿರುವ ಕ್ರೀಡಾಪಟುಗಳ ಕಣ್ಮನ ತಣಿಸುವ ಕಾರ್ಯಕ್ರಮಗಳ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟ ಇಂದಿನಿಂದ ಆರಂಭವಾಗಲಿದೆ.71 ರಾಷ್ಟ್ರಗಳ 6,600 ಕ್ರೀಡಾಪಟುಗಳು ಕೂಟದಲ್ಲಿ ಪದಕಗಳ ಬೇಟೆಯಾಡಲಿದ್ದು ಭಾರತದ 221 ಕ್ರೀಡಾಪಟುಗಳು ಕಣಕ್ಕೆ ಇಳಿಯಲಿದ್ದಾರೆ.ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಕ್ವೀನ್ಸ್‌ಲ್ಯಾಂಡ್‌ನ ಕರಾರ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭ ಆರಂಭವಾಗಲಿದೆ. ಆಸ್ಟ್ರೇಲಿಯಾದ ಸಂಸ್ಕೃತಿಯನ್ನು ಬಿಂಬಿಸುವ ರೂಪಕಗಳು ಕೂಡ ಸಿದ್ಧವಾಗಿದ್ದು ಬಣ್ಣಗಳ ಸಮ್ಮಿಲನದಲ್ಲಿ ಒಗ್ಗಟ್ಟು ಮತ್ತು ವೈವಿಧ್ಯತೆಯನ್ನು ಬಿಂಬಿಸುವ ಪ್ರಯತ್ನ ನಡೆಯಲಿದೆ.

short by: Nithin /read more at Prajavani

Comments