Skip to main content


ಇಸ್ರೋ ಮಿಲಿಟರಿ ಉಪಗ್ರಹಗಳ ಸರಣಿ

800 ಕೋಟಿ ರೂ.ಗಳ ವೆಚ್ಚದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯನ್ನು ಸ್ವಲ್ಪಕಾಲ ಮುಂದೂಡಿದ ಬಳಿಕ ಇಸ್ರೋ, ಮುಂಬರುವ ತಿಂಗಳುಗಳಲ್ಲಿ ಮಿಲಿಟರಿ ಬಳಕೆಯ ಹಲವು ಸರಣಿ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ. ನಮ್ಮ ನೆರೆಯ ಶತ್ರುರಾಷ್ಟ್ರಗಳ ಮೇಲೆ ಸತತ ನಿಗಾ ಇರಿಸಲು ಹಾಗೂ ಭೂಮಿ ಮತ್ತು ಸಾಗರ ಗಡಿಗಳ ಭದ್ರತೆಗಾಗಿ ಈ ಉಪಗ್ರಹಗಳು ಬಳಕೆಯಾಗಲಿವೆ. ಭಾರತೀಯ ವಾಯುಪಡೆಗಾಗಿ ಜಿಸ್ಯಾಟ್‌-7ಎ ಉಪಗ್ರಹವನ್ನು ಸೆಪ್ಟೆಂಬರ್‌ನಲ್ಲಿ ಹಾಗೂ ಸುಧಾರಿತ ದೂರಸಂವೇದಿ ಕಣ್ಗಾವಲು ಉಪಗ್ರಹ ರಿಯಾಸ್ಯಾಟ್‌ -2ಎ ಅನ್ನು ಈ ವರ್ಷಾಂತ್ಯದ ವೇಳೆಗೆ ಕಕ್ಷೆಗೇರಿಸಲು ಇಸ್ರೋ ನಿರ್ಧರಿಸಿದೆ. ಜಿಎಸ್‌ಎಲ್‌ವಿ-ಎಂಕೆ2 ರಾಕೆಟ್‌ ಮೂಲಕ ಜಿಸ್ಯಾಟ್‌-7ಎ ಉಡ್ಡಯನ ಮಾಡಲಾಗುವುದು.            

short by NP / read more at Vijaya Karnataka

Comments