Skip to main content


ರಾಜ್ಯದ ಈ ಜಿಲ್ಲೆಗೆ ಬರುವುದಕ್ಕೆ ಹೆದರುತ್ತಿದ್ದಾರೆ ಪ್ರಧಾನಿ ಮೋದಿ!? ಕಾರಣ ಏನು ಗೊತ್ತಾ?

ಈ ಜಿಲ್ಲಾ ಕೇಂದ್ರಕ್ಕೆ ಕಾಲಿಟ್ಟರೆ ಅಧಿಕಾರ ಹೋಗಿಬಿಡುತ್ತೆ ಅನ್ನೋ ಕಾಲವೊಂದಿತ್ತು. ಆದರೆ ಅದು ಈಗಿಲ್ಲ. ಈ ನಡುವೆ ಜಿಲ್ಲೆ ಶಾಪಗ್ರಸ್ತ ಹಣೆಪಟ್ಟಿ ಕಳಚಿಕೊಂಡು ಎಷ್ಟೋ ವರ್ಷಗಳಾಗಿ ಹೋಗಿದೆ. ಈ ನಡುವೆ ಮುಖ್ಯಮಂತ್ರಿಯಾಗಿಯೇ ಸಿಎಂ ಸಿದ್ದರಾಮಯ್ಯ ಇದುವರೆಗೆ ಹನ್ನೆರಡು ಬಾರಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿದ್ದು, ಜಿಲ್ಲೆಗೆ ಅಂಟಿದ್ದ ಶಾಪಗ್ರಸ್ತ ಅನ್ನೋ ಪಟ್ಟ ತೊಲಗಿಸುವಲ್ಲಿ ಯಶಸ್ವಿಯಾಗಿದ್ರು. ಆದ್ರೆ, ಪ್ರಧಾನಿ ನರೇಂದ್ರ ಮೋದಿಯವರು ದೂರ ಉಳಿಯುವ ಮೂಲಕ ಅಚ್ಚರಿ ಜತೆ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಂದ ಹಾಗೇ  ಚಾಮರಾಜನಗರ ಜಿಲ್ಲೆಗೆ ಯಾವ ಪ್ರಧಾನಿಯೂ ಬಂದಿರಲಿಲ್ಲ. ಆದ್ರೆ, ಇದೇ ಮೊದಲಿಗೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿಯವರು ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಸಂತೆಮರಹಳ್ಳಿಗೆ ಮಾತ್ರ ಬರುತ್ತಿದ್ದಾರೆ.  ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಹೋಗಿಬಿಡಬಹುದು ಅನ್ನೋ ರಾಜ್ಯ ಬಿಜೆಪಿ ನಾಯಕರ ಅಪಪ್ರಚಾರವೂ ಕಾರಣವಾಗಿರಬಹುದು. ಹೀಗಾಗಿಯೇ ಮೋದಿ ಕಾರ್ಯಕ್ರಮ ಬೇರೆಡೆಗೆ ಶಿಫ್ಟ್ ಆಗಿದೆ ಎನ್ನಲಾಗುತ್ತಿದೆ.             

short by Pawan / more at Kannada News Now

Comments