Skip to main content


ವೈರಲ್ ಆಗಿದೆ ಪುತ್ರಿಯೊಂದಿಗಿನ ಶಾರೂಕ್ ಫೋಟೋ

ನಿನ್ನೆ ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ಟೀಂ ಪಾಲಿಗೆ ರೋಚಕ ದಿನ. ಪಂದ್ಯ ನೋಡಲು ಬಂದ ಕೆಕೆಆರ್ ತಂಡದ ಸಹ ಸಂಸ್ಥಾಪಕ ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಹಾಗೂ ಮಗಳು ಸುಹಾನಾ ಖಾನ್ ಸಾಕಷ್ಟು ಎಂಜಾಯ್ ಮಾಡಿದ್ದರು. ತಂದೆ- ಮಗಳನ್ನು ನೋಡಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದರು. ಕೆಕೆಆರ್ ಟೀಂ ಗೆದ್ದಾಗ ಶಾರುಕ್ ಕುಣಿದಾಡಿದ್ದು, ತಂದೆ-ಮಗಳ ಮಾತುಕತೆ, ಇಬ್ಬರೂ ಗಂಭೀರವಾಗಿ ಮ್ಯಾಚ್ ನೋಡ್ತಾ ಇದ್ದಿದ್ದು, ಹುರಿದುಂಬಿಸ್ತಾ ಇದ್ದದ್ದು ಹೀಗೆ ಪಂದ್ಯವನ್ನು ಸಾಕಷ್ಟು ಎಂಜಾಯ್ ಮಾಡುತ್ತಿದ್ದ ಪೋಟೋಗಳು ಇಂಟರ್ ನೆಟ್ ನಲ್ಲಿ ವೈರಲ್ ಆಗಿವೆ.       

short by Pawan / read more at Kannadadunia

Comments