Skip to main content


ಮುಂಬೈ–ಸನ್‌ರೈಸರ್ಸ್‌ ಹಣಾಹಣಿ ಇಂದು

ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡದವರು ಐಪಿಎಲ್‌ನ ಗುರುವಾರದ ಪಂದ್ಯದಲ್ಲಿ ಸೆಣಲಿದ್ದಾರೆ. ಉತ್ತಮ ಬೌಲಿಂಗ್ ಬಳಗವನ್ನು ಹೊಂದಿರುವ ಎಸ್‌ಆರ್‌ಎಚ್‌ಗೆ ಮುಂಬೈನ ಬಲಿಷ್ಠ ಬ್ಯಾಟಿಂಗ್ ಪಡೆ ಯಾವ ರೀತಿಯ ಉತ್ತರ ನೀಡಲಿದೆ ಎಂಬ ಕುತೂಹಲಕ್ಕೆ ಈ ಪಂದ್ಯ ಕಾರಣವಾಗಲಿದೆ.

ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋತಿದ್ದ ಮುಂಬೈ ಇಂಡಿಯನ್ಸ್ ತಂಡ ಲಯಕ್ಕೆ ಮರಳುವ ಛಲದಲ್ಲಿದೆ. ಇನ್ನೊಂದೆಡೆ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿರುವ ಎಸ್‌ಆರ್‌ಎಚ್‌ ಗೆಲ್ಲುವ ಭರವಸೆಯಲ್ಲಿದೆ.                 

Short by Prajwal / read more at Prajavani

Comments