Skip to main content


ಆರ್ ಸಿಬಿ ನಾಯಕತ್ವ ಬಿಡ್ತಾರಂತೆ ಕೊಹ್ಲಿ..?!

ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ಒಬ್ಬ ನಾಯಕನಾಗಿ ಈಗಾಗಲೇ ಅವರು ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿ ತಾನೊಬ್ಬ ಉತ್ತಮ ಸಾಮರ್ಥ್ಯವಿರುವ ನಾಯಕ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಆದರೆ ಇಂಥ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಐಪಿಎಲ್ ನಲ್ಲಿ ಭಾಗವಹಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ಹಿಂದಿಂದೆ ಪಂದ್ಯಗಳನ್ನು ಕೈಚೆಲ್ಲಿ ಸೋಲನ್ನು ಅನುಭವಿಸುತ್ತಿದೆ. ಹೌದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷದ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದು ಒಟ್ಟು ಆಡಿರುವ ಆರು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಗಳಿಸಿ ನಾಲ್ಕು ಪಂದ್ಯಗಳಲ್ಲಿ ಸೋತಿದೆ.  ಈ ಸೋಲಿನಿಂದ ಕಂಗೆಟ್ಟಿರುವ ವಿರಾಟ್ ಕೊಹ್ಲಿ ಅವರು ಪಂದ್ಯ ಮುಗಿದ ಮೇಲೆ ಬೇಸರದಿಂದಲೇ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು ನಮ್ಮ ಟೀಂನ ಬೌಲಿಂಗ್ ನಲ್ಲಿ ನ್ಯೂನ್ಯತೆ ಇತ್ತು ಮ್ಯಾಚ್ ಸೋತಿದ್ದೇವೆ ಎಂದು ಸಹ ಹೇಳಿದ್ದರು. ಹಾಗೂ ತಮ್ಮ ನಾಯಕತ್ವ ಸರಿಯಾಗಿ ಕ್ಲಿಕ್ ಆಗುತ್ತಿಲ್ಲ ಎಂದು ಸಹ ಅವರು ಬೇಸರವನ್ನು ವ್ಯಕ್ತಪಡಿಸಿದರು. ಕೊಹ್ಲಿ ಅವರು ಪ್ರೆಸ್ ಮೀಟ್ ನಲ್ಲಿ ಆಡಿದ ಮಾತುಗಳನ್ನು ಕೇಳಿದ ಹಲವಾರು ಮಂದಿ ವಿರಾಟ್ ಕೊಹ್ಲಿ ಅವರು ನಾಯಕತ್ವವನ್ನು ಬಿಡುತ್ತಾರೆ ಎಂಬ ಮಾತುಗಳನ್ನು ಹೇಳತೊಡಗಿದ್ದಾರೆ.            

short by Prajwal / more at Trollhaida

Comments