Skip to main content


ತರುಣ್ ಸುದೀರ್ ನಿರ್ದೇಶನದ ದರ್ಶನ್ ಚಿತ್ರದ ಕುರಿತು ಸಿಕ್ಕಿದೆ ಒಂದು ಬಿಗ್ ಅಪ್ಡೇಟ್!!

ಆರಂಭದಲ್ಲಿ ಉಮಾಪತಿ ನಿರ್ದೇಶಕ ಪ್ರೇಮ್ ಅವರ ಚಿತ್ರವನ್ನು ನಿರ್ಮಾಣ ಮಾಡುತ್ತಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ತರುಣ್ ನಿರ್ದೇಶನದ ದರ್ಶನ್ ಸಿನಿಮಾಕ್ಕೆ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ. ಚೌಕ ನಿರ್ದೇಶಕ ತರುಣ್ ಸುದೀರ್ ವರ್ಷದ ಹಿಂದೆಯೇ ದರ್ಶನ್ ರಿಂದ ಗ್ರೀನ್ ಸಿಗ್ನಲ್ ಪಡೆದಿದ್ದರು. ಈಗಾಗಲೇ ಸ್ಕ್ರಿಪ್ಟ್ ಸಿದ್ದವಾಗಿದ್ದು ಯಾವಾಗ ಬೇಕಾದರೂ ಯೋಜನೆ ಆರಂಭಿಸಬಹುದು. ಮುನಿರತ್ನ ಅವರ ಕುರುಕ್ಷೇತ್ರದ ಡಬ್ಬಿಂಗ್ ಮತ್ತು ಹೊಸ ಚಿತ್ರ ಯಜಮಾನದಲ್ಲಿ ಬ್ಯುಸಿಯಾಗಿರುವ ದರ್ಶನ್ ಏಪ್ರಿಲ್ 6ರಿಂದ ಎರಡನೇ ಶೆಡ್ಯೂಲ್ ಚಿತ್ರೀಕರಣ ಆರಂಭಿಸಲಿದ್ದಾರೆ.

short by Pawan / read more at Kannada Prabha

Comments