Skip to main content


ಪುರುಷರ ಟೇಬಲ್‌ ಟೆನಿಸ್‌ನಲ್ಲಿ ಭಾರತಕ್ಕೆ ಚಿನ್ನ

ಭಾರತದ ಪುರುಷರ ತಂಡದವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಟೇಬಲ್‌ ಟೆನಿಸ್‌ನಲ್ಲಿ ಚಿನ್ನ ಗೆದ್ದು ಸ್ಮರಣೀಯ ಸಾಧನೆ ತೋರಿದರು.ಸೋಮವಾರ ನಡೆದ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ 3-0ರಿಂದ ಬಲಿಷ್ಠ ಜೈಜೀರಿಯಾ ತಂಡಕ್ಕೆ ಆಘಾತ ನೀಡಿತು.ಭಾನುವಾರವಷ್ಟೇ ಭಾರತದ ಮಹಿಳಾ ತಂಡ ಸಿಂಗಪುರ ತಂಡದ ವಿರುದ್ಧ ಚಿನ್ನ ಗೆಲ್ಲುವ ಮೂಲಕ ಚಾರಿತ್ರಿಕ ಸಾಧನೆ ಮಾಡಿತ್ತು. ಇದರ ಹಿಂದೆಯೇ ಪುರುಷರ ತಂಡ ಈ ಸಾಧನೆ ತೋರಿದೆ. ಈ ಮೂಲಕ ಭಾರತ ಎರಡೂ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಟೇಬಲ್‌ ಟೆಸಿಸ್‌ ಸೇರ್ಪಡೆಯಾದ ಬಳಿಕ ಇದೇ ಮೊದಲ ಬಾರಿಗೆ ಪುರುಷ ಮತ್ತು ಮಹಿಳಾ ಎರಡೂ ವಿಭಾಗದಲ್ಲಿ ಭಾರತ ಗೆಲುವು ಪಡೆದ ಸಾಧನೆ ಮಾಡಿದೆ.

short by: Nithin / read more at Prajavani

Comments