Skip to main content


ಭಯಾನಕ ‘ಐರಾನ್ ಬುಟ್’ ಬೈಕ್ ಗೇಮ್‍ಗೆ ಕೇರಳದ ಯುವಕ ಚಿತ್ರದುರ್ಗದಲ್ಲಿ ಬಲಿ

ಬೈಕ್ ಗೇಮ್ ಚಾಲೆಂಜ್ ನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಚಾಲನೆ ವೇಳೆ ಲಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಮೂಲತಃ ಕೇರಳದ ಒಟ್ಟಾಪಾಲಂ ನಿವಾಸಿಯಾಗಿರುವ ಮಿಥುನ್ ಘೋಷ್ ಸಾವನ್ನಪ್ಪಿದ ಯುವಕ. ಈತ ಕೇರಳದ ಕಾಲೇಜುವ ಪಂಬಡಿ ನೆಹರು ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ. ಐರಾನ್ ಬುಟ್ ಗೇಮ್ ಅಮೆರಿಕ ಸಂಸ್ಥೆಯೊಂದು ನಡೆಸುವ ಆನ್ ಲೈನ್ ಬೈಕ್ ಗೇಮ್ ಆಗಿದ್ದು, ಒಂದೇ ದಿನದಲ್ಲಿ (24 ಗಂಟೆ) ಒಳಗೆ 1,624 ಕಿಮೀ ದೂರ ಬೈಕ್ ಸವಾರಿ ನಡೆಸುವ ಚಾಲೆಂಜ್ ಹೊಂದಿದೆ.      

short by NP / read more at Public TV

Comments