Skip to main content


ಸಚಿವ ಅನಂತ ಕುಮಾರ್ ಹೆಗಡೆ ಪ್ರಾಣಾಪಾಯದಿಂದ ಪಾರು: ನಕ್ಸಲರಿಂದ ಕೊಲೆ ಯತ್ನ ಆರೋಪ

ಮಂಗಳವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮ್ಮ ವಿರುದ್ಧ ನಡೆದ ಕೊಲೆ ಪ್ರಯತ್ನವಿದು ಎಂದು ಸಚಿವರು ಆರೋಪಿಸಿದ್ದಾರೆ. ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಸಮೀಪ ಮಂಗಳವಾರ ರಾತ್ರಿ ಸುಮಾರು 11.30 ಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಟ್ರಕ್ ಒಂದು ವೇಗವಾಗಿ ನುಗ್ಗಿ ಬಂದು ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು. ನಮ್ಮ ಕಾರು ವೇಗವಾಗಿದ್ದರಿಂದ ಅದೃಷ್ಟವಶಾತ್‌ ಪಾರಾದೆ. ಅನಂತ ಕುಮಾರ್‌ ಅಪಘಾತದ ವೀಡಿಯೋ ಮತ್ತು ಫೋಟೋಗಳನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅಪಘಾತವಾದ ಬಗೆ ನೋಡಿದರೆ ಆಕಸ್ಮಿಕ ಎಂದು ತೋರುತ್ತಿಲ್ಲ. ಕೊಲೆ ಉದ್ದೇಶದಿಂದಲೇ ಅಪಘಾತ ಎಸಗಲಾಗಿದೆ. ಕುಡಿದು ಅಪಘಾತ ಎಸಗಿದ್ದಾನೆ ಎನ್ನಲು ಟ್ರಕ್‌ ಚಾಲಕ ಮದ್ಯ ಸೇವಿಸಿರಲಿಲ್ಲ. ಇದರ ಹಿಂದೆ ನಕ್ಸರ ಕೈವಾಡ ಇದೆ ಎಂದು ಅನಂತ್‌ ಆರೋಪಿಸಿದ್ದಾರೆ.

short by: Nithin / read more at Vijaya Karnataka

Comments