Skip to main content


ವೈರಲ್ ಆಯ್ತು ಗಲ್ಲಿ ಕ್ರಿಕೆಟ್‌ ಆಡಿದ ಸಚಿನ್ ತೆಂಡೂಲ್ಕರ್‌ ವಿಡಿಯೋ!

ವಿಶ್ವ ಕ್ರಿಕೆಟ್ ನ ಬ್ಯಾಟಿಂಗ್ ದಿಗ್ಗಜ, ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಜಗತ್ತಿನ ನಾನಾ ಕ್ರೀಡಾಂಗಣದಲ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿಸಿದ್ದು, ಇದೀಗ ರಸ್ತೆ ಬದಿಯಲ್ಲಿ ಗಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವೊಂದು ವೈರಲ್ ಆಗಿದೆ.ಹೌದು, ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿ ವರ್ಷಗಳೇ ಕಳೆದಿವೆ. ಆದರೆ ಅವರು ಮಾತ್ರ ಕ್ರಿಕೆಟ್ ಅನ್ನು ಮರೆತಿಲ್ಲ. ಕ್ರಿಕೆಟ್ ಮೇಲಿನ ಪ್ರೀತಿಯೂ ಕಡಿಮೆಯಾಗಿಲ್ಲ.  ತಮ್ಮ ಬಾಲ್ಯ ಸ್ನೇಹಿತ ವಿನೋದ್ ಕಾಂಬ್ಲಿಯೊಡನೆ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಯುವಕರು ಕ್ರಿಕೆಟ್ ಆಡುತ್ತಿದ್ದರು.ಇದನ್ನು ನೋಡಿದ ತಕ್ಷಣ ಸಚಿನ್ ತಮ್ಮ ಕಾರಿನಿಂದ ಇಳಿದು ತಾವೂ ಕೂಡ ಯುವಕರ ಜೊತೆ ಸೇರಿ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋವನ್ನು ವಿನೋದ್ ಕಾಂಬ್ಲಿಯವರು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಯೋ ವೈರಲ್ ಆಗಿದೆ.

short by: Nithin / read more at Kannadanewsnow

Comments