Skip to main content


ಕನ್ನಡಿಗ ಕೃಷ್ಣಪ್ಪ ಗೌತಮ್‌‌ ಅಬ್ಬರ: ರೋಚಕ ಪಂದ್ಯದಲ್ಲಿ ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!

ಇಂಡಿಯನ್‌‌ ಪ್ರೀಮಿಯರ್‌‌ ಲೀಗ್‌‌ನ ಮತ್ತೊಂದು ರೋಚಕ ಪಂದ್ಯದಲ್ಲಿ ಕನ್ನಡಿಗ ಕೃಷ್ಣಪ್ಪ ಗೌತಮ್ ಭರ್ಜರಿ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಮೂರು ವಿಕೆಟ್‌‌‌ ಅಂತರದ ರೋಚಕ ಗೆಲುವು ದಾಖಲಿಸಿದೆ. ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ ಏಳು ವಿಕೆಟ್‌‌ನಷ್ಟಕ್ಕೆ 167ರನ್‌‌ ಗಳಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ (9) ವಿಕೆಟ್‌‌ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ರಹಾನೆ(14) ಸಹ ವೈಫಲ್ಯ ಅನುಭವಿಸಿದರು. ತದನಂತರ ಜತೆಗೂಡಿದ ಸಂಜು ಸ್ಯಾಮ್ಸನ್ ಹಾಗೂ ಬೆನ್ ಸ್ಟೋಕ್ಸ್ ಉತ್ತಮ ಜತೆಯಾಟ ಪ್ರದರ್ಶಿಸಿದರು. ತಂಡಕ್ಕೆ 1 7 ಎಸೆತಗಳಲ್ಲಿ 43ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸಿಗಿಳಿದ ಕನ್ನಡಿಗ ಕೆ.ಗೌತಮ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ರಾಜಸ್ಥಾನಕ್ಕೆ ರೋಚಕ ಗೆಲುವನ್ನು ಒದಗಿಸಿಕೊಟ್ಟರು.           

short by Prajwal / read more at Eenadu India

Comments