Skip to main content


ಸುಳ್ಳು ಸರ್ಟಿಫಿಕೇಟ್ ನೀಡಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಸ್ಟಾರ್ ಕ್ರಿಕೆಟಿಗ….!

ಟೀಂ ಇಂಡಿಯಾದ ವೇಗಿ ಮಹಮ್ಮದ್ ಶಮಿಯ ಸುತ್ತ ಆರೋಪಗಳ‌ ಹುತ್ತ ಬೆಳೆಯುತ್ತಲೇ ಇದೆ. ಶಮಿ ಹಾಗೂ ಅವರ ಪತ್ನಿ ಹಸೀನ್ ಅವರ ನಡುವಿನ ದಾಂಪತ್ಯ ಸಂಬಂಧ ಹಳಸಿದೆ. ಪತಿಯ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿರುವ ಪತ್ನಿ ಹಸೀನ ಈಗ ಮತ್ತೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಶಮಿ ಸುಳ್ಳು ಪ್ರಮಾಣಪತ್ರವನ್ನು ನೀಡಿ ಬಿಸಿಸಿಐಗೆ ವಂಚಿಸಿದ್ದಾರೆ ಎಂದು ಹಸೀನ ಹೇಳಿದ್ದಾರೆ. ಶಮಿ ಅವರ ಡ್ರೈವಿಂಗ್ ಲೈಸೆನ್ಸ್ ಫೋಟೋವನ್ನು ಅಪ್ ಲೋಡ್ ಮಾಡಿ ಇದರಂತೆ ಶಮಿ ಜನಸಿದ್ದು 1982ರಲ್ಲಿ. ಆದರೆ, ಬಿಸಿಸಿಐಗೆ 1992 ಎಂದು ಫೇಕ್ ಸರ್ಟಿಫಿಕೇಟ್ ನೀಡಿ ಅಂಡರ್ 22 ತಂಡದಲ್ಲಿ ಸ್ಥಾನ ಪಡೆದಿದ್ರು ಅಂತ ಹಸೀನ ಆರೋಪಿಸಿದ್ದು, ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆಂದು ವರದಿಯಾಗಿದೆ.             

short by Prajwal / more at Newspoint    

Comments