Skip to main content


ಸಲ್ಮಾನ್ ಬಗ್ಗೆ ಅಸಾರಾಮ್‌ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಷಯ ಏನು!!?

5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಲ್ಮಾನ್‌, ಎರಡು ದಿನಗಳವರೆಗೆ ಜೋಧಪುರ್ ಜೈಲಿನಲ್ಲಿದ್ದರು. ಇದೇ ಜೈಲಿನಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸೆರೆಯಾಗಿರುವ ಅಸಾರಾಮ್‌ ಬಾಬು ಸಹ ಶಿಕ್ಷೆ ಅನುಭವಿಸುತ್ತಿದ್ದಾರೆ. ವಿಶೇಷ ಅಂದ್ರೆ ಇವರ ಪಕ್ಕದ ಸೆಲ್‌ನಲ್ಲಿಯೇ  ಸಲ್ಮಾನ್‌ ಅವರನ್ನು ಇರಿಸಲಾಗಿತ್ತು. ಕೇವಲ ಎರಡೇ ದಿನದಲ್ಲಿ ಸಲ್ಮಾನ್ ಹಾಗೂ ಅಸಾರಾಮ್‌ ನಡುವೆ ಸ್ನೇಹ ಬೆಳೆದಿತ್ತು. ಪರಸ್ಪರರಲ್ಲಿ ಹಲವು ವಿಚಾರಗಳ ವಿನಿಮಯವಾಗಿದೆ. ಇದೇ ವೇಳೆ ಅಸಾರಾಮ್‌ ಬಳಿ ಸಲ್ಮಾನ್ ಒಂದು ಪ್ರಮಾಣ ಮಾಡಿದ್ದಾರಂತೆ. ಇನ್ನು ಮುಂದೆ ಸಿಗರೇಟ್ ಸೇದೋಲ್ಲ ಹಾಗೂ ಕಾಫಿ ಕುಡಿಯೋದು ಕಡಿಮೆ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾರಂತೆ ಸಲ್ಮಾನ್‌. ಸಲ್ಮಾನ್ ನಿನ್ನೆ ಜೈಲಿನಿಂದ ಹೊರ ಹೋಗುತ್ತಿದ್ದಂತೆ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ ಅಸಾರಾಮ್‌.

short by: Sp / read more at EenaduIndia