Skip to main content


ಕಾಮನ್ ವೆಲ್ತ್ ಗೇಮ್ಸ್ ಗೆ ಭಾಗವಹಿಸಲಿರುವ ಪತ್ನಿಗೆ ಶುಭ ಕೋರಿದ ದಿನೇಶ್ ಕಾರ್ತಿಕ್

ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಲಿರುವ ತಮ್ಮ ಪತ್ನಿ ಹಾಗೂ ಖ್ಯಾತ ಸ್ಕ್ವಾಷ್ ತಾರೆ ದೀಪಿಕಾ ಪಳ್ಳಿಕಲ್ ಅವರಿಗೆ ಟೀಂ ಇಂಡಿಯಾದ ದಿನೇಶ್ ಕಾರ್ತಿಕ್ ಶುಭ ಕೋರಿದ್ದಾರೆ. ಕಾಮನ್ ವೆಲ್ತ್ ಕ್ರೀಡಾಕೂಟ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಬುಧವಾರ ಆರಂಭವಾಗಲಿದ್ದು, ಮಹಿಳಾ ಡಬಲ್ಸ್ ನಲ್ಲಿ ಪಳ್ಳಿಕಲ್ ಕನ್ನಡತಿ ಜೋತ್ಸ್ನಾ ಚಿನ್ನಪ್ಪ ಜೊತಗೂಡಿ ಕಣಕ್ಕಿಳಿಯಲಿದ್ದಾರೆ. 4 ವರ್ಷಗಳ ಪರಿಶ್ರಮದ ನಂತರ ಆಕೆ ಮತ್ತೊಂದು ಕಾಮನ್ ವೆಲ್ತ್ ಗೇಮ್ಸ್ ಗಾಗಿ ಆಸ್ಟ್ರೇಲಿಯಾ ತಲುಪಿದ್ದಾಳೆ. ಗೋಲ್ಡ್ ಕೋಸ್ಟ್ ನಲ್ಲಿ ಆಕೆಯ ಜೀವಮಾನದ ಕ್ಷಣವನ್ನು ಅನುಭವಿಸಲಿದ್ದಾಳೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.

short by Pawan / read more at Kannada News Now

Comments