Skip to main content


ಇವನಾರ್ವ ಡೈಲಾಗ್ ಹೇಳಿದ ಯಕ್ಷಗಾನ ಕಲಾವಿದನಿಗೆ ನೋಟಿಸ್..!

ಯಕ್ಷಗಾನ ಪ್ರಸಂಗ ಒಂದರಲ್ಲಿ ವಿದೂಷಕ ಉಚ್ಚರಿಸಿದ ರಾಹುಲ್ ಗಾಂಧಿ ಯವರ 'ಇವನರ್ವ' ಡೈಲಾಗ್ ಮೇಲೆ ಚುನಾವಣಾ ಆಯೋಗ ಕೆಂಗಣ್ಣು ಬೀರಿ ಡೈಲಾಗ್ ಹೇಳಿದ್ದ ಯಕ್ಷಗಾನ ಕಲಾವಿದನ ವಿರುದ್ದ ನೋಟಿಸ್ ಜಾರಿ ಮಾಡಿತ್ತು.ಆದರೆ ಆ ಯಕ್ಷಗಾನ ಪ್ರದರ್ಶನವು ಕೇರಳ ರಾಜ್ಯಕ್ಕೆ ಸೇರಿದ ಗ್ರಾಮದಲ್ಲಿ ನಡೆದಿದ್ದು, ಅಲ್ಲಿ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲವಾದ ಕಾರಣ  ಆಯೋಗವು ನೊಟೀಸ್ ಅನ್ನು ವಾಪಾಸ್ಸು ಪಡೆದಿದೆ.ಕಟೀಲು ಮೇಳದ ಹಾಸ್ಯ ಕಲಾವಿದ ಪೂರ್ಣೇಶ್ ಆಚಾರ್   ಯಕ್ಷಗಾನ ಪ್ರಸಂಗ ಒಂದರ ಸಂಭಾಷಣೆ ಸಂಧರ್ಭದಲ್ಲಿ ರಾಹುಲ್ ಗಾಂಧಿಯನ್ನು ಅನುಕರಣೆ ಮಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು .ಯಕ್ಷಗಾನ ಪ್ರಸಂಗದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

short by: Nithin /read more at Oneindia kannada

Comments