Skip to main content


‘ಚಾಮುಂಡಿ’ ಕೋಪಕ್ಕೆ ಬೆದರಿ ಬಾದಾಮಿಗೆ

‘ದೇಶ ಗೆದ್ದ ಹಮ್ಮಿನಲ್ಲಿರುವ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುತ್ತೇನೆ’ ಎಂದು ಸಾರುತ್ತಿರುವ, ‘ನುಡಿದಂತೆ ನಡೆದಿದ್ದೇವೆ’ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದಾಗಿ ಬಾದಾಮಿಗೂ ಲಗ್ಗೆ ಇಟ್ಟಿದ್ದಾರೆಯೇ? ಇಂತಹದೊಂದು ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಗಹನವಾಗಿ ನಡೆಯುತ್ತಿದೆ. ‘ಕಳೆದ ನಲವತ್ತು ವರ್ಷಗಳಲ್ಲಿ ಯಾವುದೇ ಮುಖ್ಯಮಂತ್ರಿ ಐದು ವರ್ಷದ ಪೂರ್ಣಾವಧಿಯನ್ನು ಪೂರೈಸಿರಲಿಲ್ಲ. ಆ ಭಾಗ್ಯವನ್ನು ಕನ್ನಡಿಗರು ಕೊಟ್ಟಿದ್ದಾರೆ. ರಾಜ್ಯದಲ್ಲಿ ಎಲ್ಲಿಯೂ ಆಡಳಿತ ವಿರೋಧಿ ಅಲೆ ಇಲ್ಲ; ಇರುವುದೆಲ್ಲ ಕಾಂಗ್ರೆಸ್ ಅಲೆ’ ಎಂದು ‘ವಿಶ್ವಾಸ’ದಿಂದ ಪ್ರತಿಪಾದಿಸುವ ಸಿದ್ದರಾಮಯ್ಯ, ಇದ್ದಕ್ಕಿದ್ದಂತೆ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲು ಅವರಲ್ಲಿನ ಪುಕ್ಕಲುತನ ಕಾರಣವೇ ಎಂಬ ಪ್ರಶ್ನೆಯ ಸುತ್ತಲೂ ಜಿಜ್ಞಾಸೆ ಗಿರಕಿ ಹೊಡೆಯುತ್ತಿದೆ.         

short by NP / more at Prajavani

Comments