Skip to main content


ಷಾಗೆ ಹೆಲಿಪ್ಯಾಡ್‌: ಅಮಾಯಕ ರೈತನ ಹೊಲ ನಾಶ

ಚುನಾವಣೆ ಪ್ರಚಾರಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಬಾಗಲಕೋಟಕ್ಕೆ ಆಗಮಿಸಿದ್ದು, ಅವರು ಇಳಿಯುವ ಹೆಲಿಪ್ಯಾಡ್‌ ನಿರ್ಮಾಣಕ್ಕಾಗಿ ಇಳಕಲ್‌ನಲ್ಲಿ ಅಮಾಯಕ ರೈತನ ಹೊಲವನ್ನೇ ನಾಶಪಡಿಸಲಾಗಿದೆ. ಹೊಲದ ಬದುಗಳನ್ನು ಒಡೆದು ಜಾಗ ಸಮ‌ ಮಾಡಿರುವುದನ್ನು ಪ್ರಶ್ನಿಸಿದ ರೈತ ಜಗದೀಶ ಕರಡಿಗೆ ಬಿಜೆಪಿಯವರು ಅವಾಚ್ಯವಾಗಿ ನಿಂದಿಸಿದ್ದಾರೆ. ಇಳಕಲ್ ನಗರದ ನಾಗೂರು ರಸ್ತೆ ಬಳಿಯ ಹೆಲಿಪ್ಯಾಡ್ ಬಳಿ ಸರ್ವೆ ನಂಬರ್ 111 ರ ಹೊಲದಲ್ಲಿ ಹೆಲಿಪ್ಯಾಡ್‌ ಮಾಡಲಾಗಿದೆ. ಸಂತ್ರಸ್ತ ರೈತ ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.    

short by Pawan / more at Vijayakarnataka

Comments