Skip to main content


ಧೋನಿ ಹೇರ್ ಸ್ಟೈಲ್; ವಿರಾಟ್ ನ್ಯೂ ಲುಕ್!

ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಪ್ರಾಯೋಜಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಅತಿ ಹೆಚ್ಚು ಜನಪ್ರಿಯತೆಯನ್ನು ಕಾಪಾಡಿಕೊಂಡಿದೆ. ಕೇವಲ ಕ್ರೀಡೆಗಷ್ಟೇ ಸೀಮಿತಗೊಳ್ಳದೆ ಈ ಗ್ಲಾಮರಸ್ ಆಟದ ಮೂಲಕ ನೋಡುಗರಿಗೆ ಅತಿ ಹೆಚ್ಚು ಮನರಂಜನೆಯನ್ನು ನೀಡಲಾಗುತ್ತಿದೆ. ಹಾಗಿರಬೇಕೆಂದರೆ ಆಟಗಾರರು ಸಹ ತಮ್ಮ ಹಾವ-ಭಾವದಲ್ಲಿ ಬದಲಾವಣೆಯನ್ನು ತಂದುಕೊಳ್ಳುತ್ತಾರೆ. ಐಪಿಎಲ್ ಬಂತೆಂದರೆ ಕ್ರಿಕೆಟಿಗರು ಭಿನ್ನ-ವಿಭಿನ್ನ ವೇಷಭೂಷಣಗಳಿಗೆ ಮಾರು ಹೋಗುತ್ತಾರೆ. ಸೀನಿಯರ್-ಜೂನಿಯರ್ ವ್ಯತ್ಯಾಸವಿಲ್ಲದೆ ಪ್ರತಿ ಫ್ರಾಂಚೈಸಿ ಆಟಗಾರರು ಅಭಿಮಾನಿಗಳ ಮನ ಸೆಳೆಯುತ್ತಾರೆ. 2018 ಐಪಿಎಲ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅತ್ತ ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಹೊಸ ಕನ್ನಡಕವನ್ನು ಧರಿಸಿ ಚಿತ್ರವನ್ನು ಹಂಚಿಕೊಂಡಿದ್ದಾರೆ.             

short by Prajwal / more at Newspoint

Comments