Skip to main content


ನಾನು ಹಲ್ಲೆ ಮಾಡಿಲ್ಲ, ದೌರ್ಜನ್ಯ ತಡೆಯಲು ಹೋಗಿದ್ದೆ- ಹಲ್ಲೆ ಸಂಬಂಧ ಜಗ್ಗೇಶ್ ಸ್ಪಷ್ಟನೆ

ಮಲ್ಲೇಶ್ವರಂನಲ್ಲಿ ನಟ ಜಗ್ಗೇಶ್ ಹಾಗೂ ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ ನಡುವೆ ಕ್ಷುಲ್ಲಕ ಕಾರಣಕ್ಕೆ ತಳ್ಳಾಟ ನೂಕಾಟ ನಡೆದಿದ್ದು, ಈ ಬಗ್ಗೆ ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ನವರಸ ನಾಯಕ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ಅವರು, ಮಂಡಲ ಮಾದೇಗೌಡರು ನನ್ನ ಬಾವ. ಅವರು ಮಲೇಶ್ವರಂ ನಲ್ಲಿ ಆರ್ಗೆನಿಕ್ ಶಾಪ್ ಇಟ್ಟುಕೊಂಡಿದ್ದಾರೆ. ಅವರ ಮಗನಿಗಾಗಿ ಮಲ್ಲೇಶ್ವರಂ 8ನೇ ಕ್ರಾಸ್ ಒಂದು ಔಟ್‍ಲೆಟ್ ಹಾಕಿಕೊಟ್ಟಿದ್ದಾರೆ. ಸುಮಾರು ಒಂದೂವರೆ ತಿಂಗಳಿಂದ ಒಬ್ಬ ವ್ಯಕ್ತಿ ಕಾರ್ಪೊರೇಟರ್ ಮಂಜಣ್ಣ ಅವರ ಹೆಸರು ಹೇಳಿಕೊಂಡು ಬೆದರಿಸಿ ರೋಲ್ ಕಾಲ್ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದನು.      

short by NP / read more at Public TV

Comments